ಕಂಠ ಬಾವು: ಶೀತ ಪದಾರ್ಥಗಳ ಅಧಿಕ ಸೇವನೆ, ತಣ್ಣನೆಯ ಪದಾರ್ಥಗಳ ಸೇವನೆಯ ನಂತರ, ತತ್ ಕ್ಷಣ ಬಿಸಿ ಪದಾರ್ಥಗಳನ್ನು ಸೇವಿಸುವುದು; ನಿರಂತರವಾಗಿ ಮಲಬದ್ಧತೆ ಇರುವುದು, ಋತುಗಳ ಪರಿವರ್ತನೆ, ಹಸಿ ತರಕಾರಿ ಫಲಗಳ ಸೇವನೆ, ಅಥವಾ ಎಣ್ಣೆಯಲ್ಲಿ ಕರೆದ ಪದಾರ್ಥಗಳ ಅಧಿಕ ಸೇವನೆ, ಅಧಿಕ ಪ್ರಮಾಣದಲ್ಲಿ ನಶೆ ಮತ್ತು ಮಾದಕ ಪದಾರ್ಥಗಳ ಸೇವನೆ, ಗಂಟಲು ಶುಷ್ಕವಾಗುವುದು, ಇತ್ಯಾದಿ ಕಾರಣಗಳಿಂದ ಕಂಠದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಮಾತನಾಡಲು ನೀರು ಕುಡಿಯಲು ಹಾಗೂ ಉಗುಳು ನುಂಗಲು ಕೂಡ ತೊಂದರೆಯಾಗುತ್ತದೆ. ಕಫ ಸಹಿತ ಕೆಮ್ಮು ಉಂಟಾಗಿ ಧ್ವನಿ ಕೂಡುತ್ತದೆ. ಗಂಟಲಲ್ಲಿ ನೋವಿರುವ ಕಾರಣ ಮಾತನಾಡಲು ಕೂಡ ತೊಂದರೆಯಾಗುತ್ತದೆ. ಕಫ ಸಹಿತ ಕೆಮ್ಮು ಉಂಟಾಗಿ ಧ್ವನಿ ಕೂಡುತ್ತದೆ. ಗಂಟಲಿನಲ್ಲಿ ನೋವಿರುವ ಕಾರಣ ಮಾತನಾಡಲು ಕೂಡ ಕಷ್ಟವಾಗುವುದು. ಇಂತಹ ಸಂದರ್ಭದಲ್ಲಿ ಕೆಳಗಿನ ಉಪಚಾರಗಳನ್ನು ಮಾಡಿ.
೧) ಹುರಳಿ ಮತ್ತು ಕರಿಮೆಣಸಿನ ಕಷಾಯದಲ್ಲಿ ಜೇನುತುಪ್ಪ ಬೆರೆಸಿ ಸೇವಿಸಿ.
೨) ತುಳಸಿ ಬೀಜದ ಎರಡು ಚಿಟಿಕೆ ಚೂರ್ಣದಲ್ಲಿ ಜೇನುತುಪ್ಪ ಸೇರಿಸಿ ನೆಕ್ಕಿ.
೩) ಬೋರೆ ಹಣ್ಣಿನ ಗಿಡದ ಎಲೆಗಳನ್ನು ಕುದಿಸಿ, ಕಷಾಯ ಸಿದ್ಧಪಡಿಸಿ, ಅದರಲ್ಲಿ 2 ಚಮಚ ಜೇನುತುಪ್ಪ ಬೇರಸಿ ಸೇವಿಸಿ.
೪) ಸ್ವಲ್ಪ ಪಟಕವನ್ನು ಹುರಿದು ಅದನ್ನು 3 ಗ್ರಾಂ ಜೇನು ತುಪ್ಪದಲ್ಲಿ ಸೇರಿಸಿ ನೆಕ್ಕಿ.
೫) ಕೊರಳಿಗೆ ಜೇನುತುಪ್ಪ ಲೇಪಿಸಿ ಪಟ್ಟಿಯನ್ನು ಕಟ್ಟಿ.