ಕೂಗು ನಿಮ್ಮದು ಧ್ವನಿ ನಮ್ಮದು

ಸಿಕ್ಸರ್ ಭಾರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್!

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಂದನಹೊಸೂರ ಗ್ರಾಮದ ಪವರ್ ಸ್ಟಾರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿಗಳನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಸಂಜೆ ಉದ್ಘಾಟಸಿದರು.

ಈ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ ನೀಡಲಾಗುತ್ತಿದೆ. ಬ್ಯಾಟ್ ಹಿಡಿದು ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಹೆಬ್ಬಾಳಕರ್, ರಾಜಕೀಯಕ್ಕಷ್ಟೇ ಅಲ್ಲ ಕ್ರೀಡೆಗೂ ಸೈ ಎಂದು ತೋರಿಸಿದರು. ಕಲಹೊತ್ತು ಕ್ರಿಕೆಟ್ ಆಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ಗ್ರಾಮೀಣ ಕ್ಷೇತ್ರದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ವಯಕ್ತಿಕವಾಗಿ ಹಾಗೂ ಶಾಸಕರ ನಿಧಿಯಿಂದಲೂ ಅನುದಾನ ನೀಡಲಾಗುತ್ತಿದೆ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮದ ಶಂಕರ ಎನ್ನುವ ವಿಕಲಚೇತನ ವ್ಯಕ್ತಿಗೆ ಸರ್ಕಾರದಿಂದ ತ್ರಿಚಕ್ರ ವಾಹನವನ್ನು ಮಂಜೂರು ಮಾಡಿಸಿ‌ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.

error: Content is protected !!