ಕೂಗು ನಿಮ್ಮದು ಧ್ವನಿ ನಮ್ಮದು

KSRTC ಬಸ್ ಫಾರ್ಚ್ಯೂನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ನಾಲ್ವರ ದುರ್ಮರಣ

ವಿಜಯಪುರ: ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಜವರಾಯ ತನ್ನ ಅಟ್ಟಹಾಸ ಮೇರೆದಿದ್ದು ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕಿಡಾಗಿದ್ದಾರೆ. ಸರ್ಕಾರಿ ಬಸ್ ಹಾಗೂ ಫಾರರ್ಚೂನರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಫಾರ್ಚ್ಯೂನರ್ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ಜುಮನಾಳ ಕ್ರಾಸ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಫಾರ್ಚ್ಯೂನರ್ ಕಾರಿನ ಅತೀವೇಗ ಹಾಗೂ ಚಾಲಕನ ಆಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ಕೆ ನರಗುಂದ ದಿಂದ ವಿಜಯಪುರಕ್ಕೆ ಆಗಮಿಸಿದ್ದ ಸರ್ಕಾರಿ ಬಸ್, ನಿಶ್ಚಿತಾರ್ಥ ಕಾರ್ಯ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಈ  ಅವಘಡ ಸಂಭವಿಸಿದೆ.

KA 22 F2198 ನಂಬರಿನ ಬಸ್ ನರಗುಂದನತ್ತ ತೆರಳುತ್ತಿದ್ದಾಗ ಎದುರರಿನಿಂದ ವೇಗವಾಗಿ ಆಗಮಿಸಿದ MH13 CS 3330 ನಂಬರಿನ ಫಾರ್ಚ್ಯೂನರ್ ಕಾರ್ ಮಧ್ಯೆ ಮುಖಾಮುಖಿಯಾಗಿದೆ. ಡಿಕ್ಕಿಯ ರಭಸಕ್ಕೆ ಫಾರ್ಚ್ಯೂನರ್ ನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವಿಗಿಡಾಗಿದ್ದಾರೆ. ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ  52 ರಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಇನ್ನು ಮೃತರನ್ನು ಚಿದಾನಂದ ನಾಗೇಶ ಸೂರ್ಯವಂಶಿ (45), ಸೋಲಾಪುರದ ನಾಂದೇಢ ಪಟ್ಟಣದವರು. ಸೋಮನಾಥ ಕಾಳೆ (43) ರಾಜೂರ ಗ್ರಾಮ ಸೋಲಾಪುರ ಜಿಲ್ಲೆ. ಸಂದೀಪ ಪವಾರ (40) ಬಸವನಗರ ಸೋಲಾಪುರ ಪಟ್ಟಣ ನಿವಾಸಿ. ವಿಜಯಕುಮಾರ್ ಕಾಶಿನಾಥ್ ದೊಡಮನಿ (32) ವಿಜಯಪುರ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

error: Content is protected !!