ಕೂಗು ನಿಮ್ಮದು ಧ್ವನಿ ನಮ್ಮದು

ದೀಪಾವಳಿ ಹಬ್ಬ ಹಿನ್ನೆಲೆ KSRTCಯಿಂದ 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ

ಬೆಂಗಳೂರು : ದೀಪಾವಳಿ ಹಬ್ಬ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ KSRTC 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಮೆಜೆಸ್ಟಿಕ್ ಸೇರಿ ನಗರದ ವಿವಿಧ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ,ಆಂಧ್ರಪ್ರದೇಶ, ತೆಲಂಗಾಣದ ಬಸ್ ಗಳು ಲಭ್ಯವಿರಲಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 21 ಮತ್ತು 23ರಂದು ಹೆಚ್ಚುವರಿ 1500 ಬಸ್ ಗಳನ್ನು ಕೆಎಸ್ ಆರ್ ಟಿಸಿ ವ್ಯವಸ್ಥೆ ಮಾಡಿದೆ. ಮೆಜೆಸ್ಟಿಕ್, ಮೈಸೂರು ರಸ್ತೆ, ಸ್ಯಾಟಲೈಟ್, ಶಾಂತಿನಗರ, ಗೊರಗುಂಟೆಪಾಳ್ಯದಿಂದ ಈ ಬಸ್ ಗಳು ಲಭ್ಯವಿರಲಿದೆ. ಇನ್ನು ಊರಿಗೆ ತೆರಳಿದವರು ವಾಪಾಸ್ ಆಗಲು ಅನುಕೂಲವಾಗುವಂತೆ ಅಕ್ಟೋಬರ್ 26 ರಿಂದ 30ರ ವರೆಗೆ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಲಾಗಿದೆ. ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಾತ್ರವಲ್ಲ ಅಂತಾರಾಜ್ಯ ಪ್ರಯಾಣಿಕರಿಗೆ ವಾಪಸ್ ಬರಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ ಪ್ರಾಯಾಣಿಕರಿಗೆ 5% ರಿಯಾಯಿತಿ ನೀಡಲಾಗುವುದು. ಬರುವ ಮತ್ತು ಹೋಗುವ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ 10% ರಿಯಾಯಿತಿ ನೀಡಲಿದೆ. ಬುಕ್ಕಿಂಗ್ ಮೇಲೆ ರಿಯಾಯಿತಿಮತ್ತು ಬಸ್ ಸೌಲಭ್ಯಗಳ ಹೆಚ್ಚಿನ ವಿವರಗಳನ್ನು ಪ್ರಯಾಣಿಕರು www.ksrtc.Karnataka.govt.in ವೆಬ್ ಮೂಲಕ ಪಡೆದುಕೊಳ್ಳಬಹುದು. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ನಿಗಮ ಪ್ರಕಟಣೆ ಹೊರಡಿಸಿದೆ

error: Content is protected !!