ಕೂಗು ನಿಮ್ಮದು ಧ್ವನಿ ನಮ್ಮದು

ಖಾತೆ ಹಂಚಿಕೆ ವಿಚಾರದಲ್ಲಿ ಇವರಿಬ್ಬರಿಗೂ ಅಸಮಾಧಾನ, ಅದನ್ನು ಮುಖ್ಯಮಂತ್ರಿ ಸರಿಪಡಿಸುತ್ತಾರೆ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ನೂತನ ಸಚಿವರಿಗೆ ಸಿಎಂ ಅವರು ಈಗಾಗಲೇ ಖಾತೆ ಹಂಚಿಕೆಯನ್ನು ಮಾಡಿದ್ದಾರೆ. ಆದ್ರೆ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅವರು ಮಾತ್ರ ತಮಗೆ ಬೇರೆ ಬೇರೆ ಖಾತೆ ಬೇಕೆಂದು ಕೇಳುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ರು. ಇನ್ನೂ ಸಿಎಂ ಇವರಿಬ್ಬರನ್ನು ಸಮಾಧಾನ ಪಡಿಸುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ತಿಳಿಸಿದ್ರು.

ಇನ್ನೂ ಶಿವಮೊಗ್ಗ ದಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಖಾತೆ ಹಂಚಿಕೆಯಲ್ಲಿ ಆಗಲಿ, ಸಚಿವ ಸಂಪುಟದಲ್ಲಿ ಆಗಲಿ ಯಾವುದೇ ಗೊಂದಲವಿಲ್ಲ. ಜೊತೆಗೆ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅವರು ತಮ್ಮ ತಮ್ಮ ಭಾವನೆಗಳನ್ನು ತೋಡಿಕೊಂಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಜೊತೆಗೆ ಇವರಿಬ್ಬರು ಸಿಎಂ ಬಳಿ ಚರ್ಚೆ ನಡೆಸಿ ಬಗೆಹರಿಸಿಕೊಳ್ಳುತ್ತಾರೆ ಎಂದಿದ್ದಾರೆ. ಇನ್ನೂ ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಮಾತನಾಡಿದ ಸಚಿವರು ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಮಾಡುತ್ತಿದ್ದಾರೆ.

ಹಾಗೆ ಸುಪ್ರೀಂಕೋರ್ಟಿನ ತೀರ್ಪಿನ ಅನುಸಾರ ಮೇಕೆದಾಟು ಯೋಜನೆ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ. ಇನ್ನೂ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಯೂ ನಿಲ್ಲುವುದಿಲ್ಲ ಎಂದಿದ್ದಾರೆ. ಜೊತೆಗೆ ತಮಿಳುನಾಡಿನ BJP ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಅವರು ಉಪವಾಸ ಆದ್ರು ಮಾಡಲಿ, ಏನಾದರೂ ಮಾಡಲಿ ಅದು ನಮಗೆ ಸಂಬಂಧವಿಲ್ಲ. ಇನ್ನೂ ರಾಜಕಾರಣಿಯಾಗಿ ಅವರ ರಾಜ್ಯಕ್ಕೆ ಏನು ಬೇಕು ಅದನ್ನ ಅವರು ಯೋಚನೆ ಮಾಡುತ್ತಿದ್ದಾರೆ ಅದು ತಪ್ಪೆನಿಲ್ಲ.

ಜೊತೆಗೆ ಅವರ ರಾಜ್ಯಕ್ಕೆ ಒಳ್ಳೆಯದಾಗುವ ದಿಕ್ಕಿನಲ್ಲಿ ಹೋರಾಟ ಮಾಡಿ, ಅಲ್ಲಿ ಪಕ್ಷವನ್ನು ಕಟ್ಟಿಕೊಳ್ಳಲಿ. ಇದರ ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಅವರು ಗಮನ ಹರಿಸಲಿ ಎಂದು ಸಚಿವ ಈಶ್ವರಪ್ಪ ನವರು ತಿಳಿಸಿದ್ರು. ಇನ್ನೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿಎಂ ಹುದ್ದೆಯನ್ನು ಅಲಂಕರಿಸಿದ ನಂತರ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಆಗಿ ಆಶೀರ್ವಾದವನ್ನು ಪಡೆದಿದ್ದಾರೆ. ಜೊತೆಗೆ ದೇವೇಗೌಡರು ಮಾಜಿ ಪ್ರಧಾನಿಗಳು, ಹಿರಿಯ ರಾಜಕಾರಣಿ, ರೈತ ನಾಯಕರು ಅಂತಾ ಭೇಟಿ ಆಗಿದ್ದಾರೆ ಹೊರತು ಜೆಡಿಎಸ್ ನಾಯಕರು ಅಂತ ಅಲ್ಲ ಎಂದು ಸ್ಪಷ್ಟಪಡಿಸಿದ್ರು.

ಇನ್ನೂ ಹಾಸನ ಜಿಲ್ಲೆಯಲ್ಲಿ ದೇವೇಗೌಡರು, ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಶಕ್ತಿಯನ್ನು ಮೀರಿ ಒಬ್ಬ ಸಾಮಾನ್ಯ ಕಾರ್ಯಕರ್ತ ಪ್ರೀತಂಗೌಡ ಶಾಸಕರಾಗಿದ್ದಾರೆ. ಇನ್ನೂ ಹಾಸನದಲ್ಲಿ ಸಂಘಟನೆ ಕಟ್ಟಬೇಕು ಎಂಬ ಪ್ರಯತ್ನವನ್ನು ಸಹ ಪ್ರೀತಂ ಗೌಡನವರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ದೇವೇಗೌಡರ ಭೇಟಿ ಆಗಿದ್ದು ಸಮಾಧಾನ ತಂದಿಲ್ಲ ಎನಿಸುತ್ತದೆ ಎಂದ್ರು. ಇನ್ನೂ ದೇವೇಗೌಡರು ಅವರ ಅಧಿಕಾರದ ಅವಧಿಯಲ್ಲಿ ಒಳ್ಳೆ ಒಳ್ಳೆಯ ಕೆಲಸವನ್ನು ಏನು ಮಾಡಿದ್ರು. ಜೊತೆಗೆ ಯಾವುದೇ ಕಾರಣಕ್ಕೂ ನಮ್ಮ ರಾಜಕಾರಣಕ್ಕೆ BJP ಚಟುವಟಿಕೆಗೆ ಬಸವರಾಜ್ ಬೊಮ್ಮಾಯಿ, ದೇವೇಗೌಡರ ಭೇಟಿ ತೊಂದರೆ ಆಗುವುದಿಲ್ಲ ಎಂಬುದನ್ನು ಸಹ ತಿಳಿಸುತ್ತೇವೆ ಎಂದು ಸಚಿವ ಈಶ್ವರಪ್ಪನವರು ತಿಳಿಸಿದ್ರು.

error: Content is protected !!