ಕೂಗು ನಿಮ್ಮದು ಧ್ವನಿ ನಮ್ಮದು

ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದ್ರೆ ಎನೇಲ್ಲಾ ಲಾಭ ಇದೆ ನೋಡಿ

ಕೆಲವರು ನಕ್ಷತ್ರ ಬರುವವರೆಗೂ ಕಾದು, ನಕ್ಷತ್ರ ಕಂಡ ನಂತರ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತಾರೆ. ಇನ್ನು ಕೃಷ್ಣ ಜನಿಸಿದ ಈ ವಿಶೇಷ ದಿನವನ್ನು ಗೋಕುಲಾಷ್ಟಮಿ, ಶ್ರೀ ಕೃಷ್ಣ ಜಯಂತಿ, ಕೃಷ್ಣ ಜನ್ಮಾಷ್ಟಮಿ ಹೀಗೆ ದೇಶದ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಆಚರಣೆ ಮಾಡುತ್ತಾರೆ. ಕೃಷ್ಣ ಜನ್ಮಾಷ್ಟಮಿ ಹತ್ತಿರ ಬಂದಿದೆ. ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಭಗವಾನ್ ವಿಷ್ಣು ಕೃಷ್ಣನಾಗಿ ಭೂಮಿಯಲ್ಲಿ ಜನಿಸಿದ ದಿನವನ್ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಪೂಜಾ ವಿಧಿ ವಿಧಾನಗಳು ವಿಭಿನ್ನವಾಗಿರುತ್ತದೆ. ಅಲ್ಲದೇ, ಈ ದಿನ ಉಪವಾಸವನ್ನು ಸಹ ಮಾಡಲಾಗುತ್ತದೆ. ಹಾಗಾದರೆ ಈ ದಿನ ಉಪವಾಸವನ್ನು ಮಾಡುವುದು ಏಕೆ. ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿದೆ ಹಾಗೂ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ವರ್ಷ ಅಷ್ಟಮಿ ತಿಥಿಯು ಆಗಸ್ಟ್ 18 ರಂದು ರಾತ್ರಿ 09:20 ಕ್ಕೆ ಪ್ರಾರಂಭವಾಗಿ ಆಗಸ್ಟ್ 19, 2022 ರಂದು ರಾತ್ರಿ 10:59 ಕ್ಕೆ ಕೊನೆಗೊಳ್ಳುತ್ತದೆ. ಆಗಸ್ಟ್ 18 ರಂದು ರಾತ್ರಿ 12:02 ರಿಂದ 12:48 ರವರೆಗೆ ಪೂಜೆಯನ್ನು ಮಾಡಬೇಕು. ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ ಕಾರಣ, ಆಗಸ್ಟ್ 18 ರಂದು ಜನ್ಮದಿನವನ್ನು ಆಚರಿಸುವುದು ಸೂಕ್ತ.

ಉಪವಾಸದ ಮಹತ್ವವೇನು? ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಮಾಡುವ ವ್ರತವನ್ನು ಅಥವಾ ಉಪವಾಸವನ್ನು ‘ವ್ರತರಾಜ’ ಎಂದು ಸಹ ಕರೆಯಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುವುದರಿಂದ ಬೇರೆ ಉಳಿದೆಲ್ಲಾ ಉಪವಾಸಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನಲಾಗುತ್ತದೆ. ಜನ್ಮಾಷ್ಟಮಿ ದಿನದಂದು ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಪಡೆಯಬಹುದು. ಅಲ್ಲದೇ, ದೀರ್ಘಾಯುಷ್ಯವನ್ನು ಮತ್ತು ಪಿತೃದೋಷದಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.
ವರಾಹ ಪುರಾಣದ ಪ್ರಕಾರ, ಕೃಷ್ಣ ಜನ್ಮಾಷ್ಟಮಿಯ ರಾತ್ರಿ ಮಹಿಳೆ ಪತಿಯೊಡನೆ ಉಪವಾಸ ಮಾಡಿದರೆ ಅವಳ ಹೃದಯದಲ್ಲಿ ಭಗವಂತನು ನೆಲೆಸಿರುತ್ತಾನಂತೆ. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎನ್ನಲಾಗುತ್ತದೆ. ಕೃಷ್ಣನ ಅವತಾರದ ಬಗ್ಗೆ ಹಾಗೂ ಲೀಲೆಗಳ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ದುಷ್ಟರನ್ನು ಶಿಕ್ಷಿಸಿ, ದುಷ್ಟರನ್ನು ರಕ್ಷಿಸುವ ಸಲುವಾಗಿ ಧರೆಗಿಳಿದು ಬಂದ ಕೃಷ್ಣ ಹಲವಾರು ರಾಕ್ಷಸರನ್ನು ವಧಿಸಿದ್ದಾನೆ. ಕೃಷ್ಣನಿಗೆ ಹಲವಾರು ಹೆಸರುಗಳಿದೆ. ವಧಿಸಿದ ರಾಕ್ಷಸರ ಹೆಸರನ್ನು ಬಳಸಿ ಕೃಷ್ಣನಿಗೆ ಕರೆಯಲಾಗುತ್ತದೆ.

ರಾಂಚೋಡ್ ಹೆಸರು ಬರಲು ಕಾರಣವೇನು? ಹಾಗೆಯೇ ಕೃಷ್ಣನಿಗೆ ರಾಂಚೋಡ್ ಎನ್ನುವ ಹೆಸರು ಬಂದಿದೆ. ಇದರ ಅರ್ಥ ಯುದ್ಧ ಭೂಮಿಯಿಂದ ಪಲಾಯನ ಆಗುವವನು ಎಂದು. ಈ ರೀತಿ ಹೆಸರು ಬರಲು ಸಹ ಒಂದು ಕಾರಣವಿದೆ. ದ್ವಾಪರ ಯುಗದಲ್ಲಿ ಶೇಷೀರಾಯನ್ ಋಷಿಯ ಮಗ ಕಲ್ಯಾವನ ಯಾರಿಂದಲೂ ಸೋಲದಂತಹ ಶಕ್ತಿಯುಳ್ಳ ವ್ಯಕ್ತಿ. ಕೃಷ್ಣ ಕಂಸನನ್ನ ಕೊಂದ ಕಾರಣ ಕೋಪದಲ್ಲಿದ್ದ ಜರಾಸಂಧನ ಜೊತೆ ಈ ಕಲ್ಯಾವನ ಕೈ ಜೋಡಿಸುತ್ತಾನೆ. ಶಿವನ ಆಶೀರ್ವಾದ ಪಡೆದ ಕಲ್ಯಾವನನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ಕೃಷ್ಣನಿಗೆ ಗೊತ್ತಿತ್ತು. ಹಾಗಾಗಿ ಮಥುರಾ ನಗರವನ್ನು ಯುದ್ಧದಿಂದ ರಕ್ಷಿಸಬೇಕು ಎನ್ನುವ ಉದ್ದೇಶದಿಂದ ಕೃಷ್ಣನು ಜನರಿಂದ ಮತ್ತು ಸೈನ್ಯದಿಂದ ದೂರದ ಪರ್ವತದ ಕಡೆಗೆ ಓಡಿ ಹೋದನು. ಹಾಗಾಗಿ ಕೃಷ್ಣನಿಗೆ ರಾಂಚೋಡ್ ಎಂದು ಕರೆಯಲಾಗುತ್ತದೆ. ಇದು ನಕರಾತ್ಮಕ ಎನಿಸಬಹುದು ಆದರೆ ಜನರಿಗಾಗಿ ಕೃಷ್ಣ ಈ ರೀತಿ ಮಾಡಿದ್ದು ಎಂಬುದು ಸಹ ಮುಖ್ಯವಾಗುತ್ತದೆ.

error: Content is protected !!