ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಕೋವಿಡ್-19 ಸೋಂಕಿನ ಪಾಸಿಟಿವ್ ವರದಿ ಆದಲ್ಲಿ ಕೋವಿಡ್-19 ಮಹಾಮಾರಿ ಮನೆಯ ಇತರೆ ಸದಸ್ಯರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲು ಅನುವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಸರಕಾರಿ/ ಸಂಘ-ಸಂಸ್ಥೆಗಳ ಮೂಲಕ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಈ ಕೋವಿಡ್ ಕೇರ್ ಕೇಂದ್ರದಲ್ಲಿ ಉಚಿತ ಉಟೋಪಚಾರದ ವ್ಯವಸ್ಥೆ ಹಾಗೂ ವೈದ್ಯಕೀಯ ವ್ಯವಸ್ಥೆ ಇರುತ್ತದೆ. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಪಟ್ಟು ಪಾಸಿಟಿವ್ ವರದಿ ಬಂದಲ್ಲಿ ಮನೆಯ ಸದಸ್ಯರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಲು ಹಾಗೂ ಸೋಂಕು ದೃಢಪಟ್ಡಿರುವವರು ನಿರ್ಲಕ್ಷಿಸದೇ ಈ ಕೋವಿಡ್ ಕೇರ್ ಸೆಂಟರ್ ಗಳ ಸದುಪಯೋಗ ಪಡೆದುಕೊಂಡು ಕೋವಿಡ್-19 ರೋಗ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಲು ಈ ಮೂಲಕ ತಿಳಿಸಲಾಗಿದೆ.
ಇನ್ನು ನಗರದಲ್ಲಿ ಎಲ್ಲೇಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ ಅನ್ನೊ ಮಾಹಿತಿ ಈ ಕೇಳಗೆ ನೀಡಲಾಗಿದೆ.