ಹುಬ್ಬಳ್ಳಿ: ಕೆಲವೊಮ್ಮೆ ವೈದ್ಯ ಲೋಕದಲ್ಲಿ ಕಂಡರಿಯದ ಅಚ್ಚರಿಗಳು ನಡೆಯುತ್ತಲೆ ಇರುತ್ತವೆ. ವೈದ್ಯರಿಗೆ ಸವಾಲನ್ನೊಡ್ಡುವ ಸಂಗತಿಗಳು ನಾವು ನೋಡುತ್ತಲೇ ಇದ್ದೇವೆ, ಈ ಒಂದು ಸ್ಟೋರಿಯಲ್ಲಿ ಕೂಡ ವೈದ್ಯರಿಗೆ ಅಚ್ಚರಿಯುಂಟು ಮಾಡಿದ ಘಟನೆ ನಡೆದಿದೆ.ಹೌದು ಹುಟ್ಟುತ್ತಲೆ ಅಚ್ಚರಿ ಉಂಟುಮಾಡಿದ ಮಗುವಿನ ಜನನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ಮಗುವಿನ ಫೋಟೋ ಭಾರಿ ಸುದ್ದಿಯಾಗಿದೆ. ಸೊಂಟದ ಕೆಳ ಭಾಗದಲ್ಲಿ ಕಾಲು ಹೊರತು ಪಡಿಸಿ ಇನ್ನಾವುದೇ ಸಾಮಾನ್ಯ ಅಂಗಾಂಗಳಿಲ್ಲದೆ ಜನಿಸಿದ ಮಗುವನ್ನು ನೋಡಿದ ವೈದ್ಯರು ಆಶ್ಚರ್ಯ ಗೊಂಡಿದ್ದಾರೆ.ಮಗುವಿನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಮುನ್ನವೇ ಮಗು ಜನಿಸಿದ ಅರ್ಧ ಗಂಟೆಯಲ್ಲಿ ಮೃತಪಟ್ಟಿದೆ. ಆದರೆ ಈ ಹೊತ್ತಿಗಾಗಲೇ ಮಗುವಿನ ಫೋಟೊ ವೈರಲ್ ಆಗಿದ್ದು , ನೋಡಿದವರು ಬೆರಗಾಗಿದ್ದಾರೆ. ಹೆರಿಗೆ ನೋವಿನಿಂದ ನಿನ್ನೆ ಭಾನುವಾರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ರೇಷ್ಮಾ ಬಾನು ಏಳು ತಿಂಗಳ ಗರ್ಭಿಣಿಯಾಗಿದ್ದರು. ವಿಭಿನ್ನವಾಗಿ ಜನಿಸಿದ ಮಗುವಿನ ಬಗ್ಗೆ ಮಾಹಿತಿ ಪಡೆಯಲು ಮಕ್ಕಳ ವಿಭಾಗದ ತಜ್ಞರು ಹಲವು ಕಡೆಗಳಲ್ಲಿ ಸಿದ್ಧತೆ ನಡೆಸಿದ್ದರು, ಅಷ್ಟರ ಹೊತ್ತಿಗೆ ಮಗು ಮೃತಪಟ್ಟಿದೆ.
ಮಗು ಏಳು ತಿಂಗಳಿಗೆ ಜನಿಸಿದ್ದರಿಂದಾಗಿ ಮಗುವಿನ ಬೆಳವಣಿಗೆ ಹೊಂದಿರುವುದಿಲ್ಲ ಎಂಬುದು ತಿಳಿದಿತ್ತು ಆದರೆ ಈ ರೀತಿಯಾಗಿ ಒಂದೇ ಕಾಲಿನ ವಿಚಿತ್ರ ಮಗು ಜನಿಸಿದ್ದರಿಂದಾಗಿ ಅಚ್ಚರಿಪಟ್ಟೆವು ಅನುವಂಶೀಯ ಸಮಸ್ಯೆಯಿಂದಾಗಿ,ಅಂಗವೈಕಲ್ಯದ ಮಗು ಹುಟ್ಟುವುದು ಸಾಮಾನ್ಯ ಆದರೆ ಈ ಮಗು ಅಪರೂಪದ ಮಗುವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.