ಕೂಗು ನಿಮ್ಮದು ಧ್ವನಿ ನಮ್ಮದು

ಬಿಗ್ ಬಾಸ್ ಕನ್ನಡ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್: ಜೂ.23ಕ್ಕೆ ಮಹಾಸಂಚಿಕೆ!

ಬೆಂಗಳೂರು: ಕೊರೋನಾ 2ನೇ ಅಲೆ ತೀವ್ರವಾಗಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಇದೇ ಬುಧವಾರ (ಜೂ.23) ಪುನರಾರಂಭವಾಗುತ್ತಿದೆ. ಬಿಗ್ ಬಾಸ್ ಸೀಸನ್ ನ್ನು ಅರ್ಧಕ್ಕೆ ಸ್ಥಗಿತಗೊಳಿಸಿದಾಗ ಅದನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಮತ್ತು ಮನೆಯೊಳಗಿದ್ದ 12 ಮಂದಿ ಸ್ಪರ್ಧಿಗಳಿಗೆ ಬೇಸರವಾಗಿತ್ತು. ಇದೀಗ ಕೊರೋನಾ ಸೋಂಕಿನ ಎರಡನೇ ಅಲೆ ಕಡಿಮೆಯಾಗಿ ಸರ್ಕಾರ ನಿರ್ಬಂಧವನ್ನು ಸಡಿಲಗೊಳಿಸುತ್ತಿದ್ದಂತೆ ಕಲರ್ಸ್ ಕನ್ನಡ ವಾಹಿನಿ ರಿಯಾಲಿಟಿ ಶೋವನ್ನು ಮತ್ತೆ ಆರಂಭಿಸುತ್ತಿದೆ. ಇದನ್ನು ಎರಡನೇ ಇನ್ಸಿಂಗ್ಸ್ ಎಂದು ವಾಹಿನಿ ಕರೆದಿದೆ. ಅರ್ಧಕ್ಕೆ ನಿಂತಿದ್ದ ಕನಸು ಮುಂದುವರಿಯುತ್ತಾ ಅಥವಾ ಹೊಸ ಕನಸು ಶುರು ಆಗುತ್ತಾ ಇದೇ ಬುಧವಾರ ಮೊದಲ ಮಹಾಸಂಚಿಕೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ. ಹೊಸ ಸಂಚಿಕೆಯಲ್ಲಿ ಹಳೆ ಸ್ಪರ್ಧಿಗಳೇ ಇರುತ್ತಾರೆಯೇ ಅಥವಾ ಹೊಸಬರ ಸೇರ್ಪಡೆಯಾಗುತ್ತದೆಯೇ ಎಂದು ಗುಟ್ಟು ಬಿಟ್ಟುಕೊಟ್ಟಿಲ್ಲ ವಾಹಿನಿ. ನಾಡಿದ್ದಿನ ಮಹಾ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

error: Content is protected !!