ಕಲಬುರ್ಗಿ: ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೆಇಎ ಸ್ಪರ್ಧಾತ್ಮಕ ಪರೀಕ್ಷೆ ಇಂದು ಮತ್ತು ನಾಳೆ ಅಂದ್ರೆ ನವೆಂಬರ್ 18 ಮತ್ತು 19 ರಂದು ನಡೆಯಲಿವೆ.
ವಿಶೇಷ ಅಂದ್ರೆ ಈ ಹಿಂದೆ ಕಲಬುರಗಿಯಲ್ಲಿ ನಡೆದ ಪರೀಕ್ಷೆಯಲ್ಲಿ ಎಡವಟ್ಟುಗಳಾಗಿ ವಿವಾದಕ್ಕೆ ಕಾರಣವಾದ ಹಿನ್ನಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಅದಕ್ಕಾಗಿ ಹಲವು ಷರತ್ತುಗಳನ್ನು ಹಾಕಿದೆ. ಆದ್ರೆ ಮಂಗಲಸೂತ್ರ, ಕಾಲುಂಗುರ ಧರಿಸಲು ಯಾವುದೇ ಅಭ್ಯಂತರವಿಲ್ಲ ಅಂತ ಹೇಳಿದೆ.
ಜಿಲ್ಲೆಯಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಿದ್ದು 14,058 ಜನ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎನ್ನಲಾಗಿದೆ.