ಕೂಗು ನಿಮ್ಮದು ಧ್ವನಿ ನಮ್ಮದು

ಇಪ್ಪತ್ತು ನಿಮಿಷದಲ್ಲಿ ಹತ್ತು ಕೆಜಿಯ ಕಾಠಿ ರೋಲ್ ತಿಂದವರಿಗೆ ಸಿಗುತ್ತೆ ಭರ್ಜರಿ ಬಹುಮಾನ

ದೆಹಲಿ: ಇಪ್ಪತ್ತು ಸಾವಿರ ರೂಪಾಯಿಯನ್ನು ಗೆಲ್ಲಬೇಕಾ? ಹಾಗಾದ್ರೆ ನೀವು ೧೦ ಕೆಜಿ ಇರುವಂತಹ ಮತ್ತು ಮೂವತ್ತು ಮೊಟ್ಟೆಗಳಿಂದ ತಯಾರಿಸಿರುವ ಕಾಠಿ ರೋಲ್ ಅನ್ನು ತಿನ್ನಬೇಕಾಗುತ್ತದೆ.
ಹೌದು, ದೆಹಲಿಯ ಮಾಡೆಲ್ ಟೌನ್ ೩ರಲ್ಲಿ ರಸ್ತೆ ಬದಿಯ ಫುಡ್ ಸ್ಟಾಲ್ ಈ ಸವಾಲನ್ನು ಒಡಿದ್ದು, ಇಪ್ಪತ್ತು ನಿಮಿಷಗಳಲ್ಲಿ ಕಾಠಿ ರೋಲ್ ಅನ್ನು ತಿಂದು ಮುಗಿಸಿದ ಅವರಿಗೆ ೨೦,೦೦೦ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ಈಗ ಈ ಕಾಠಿ ರೋಲ್‍ನ ವೀಡಿಯೋವನ್ನು ದಿ ಫುಡ್ ಕಲ್ಟ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಹಿಟ್ಟನ್ನು ಲಟ್ಟಿಸಿ ಅದನ್ನು ತವಾ ಮೇಲೆ ಹಾಕಿ ಅದರ ಮೇಲೆ ಮೊಟ್ಟೆ ಒಡೆದು ಬೇಯಿಸಿಕೊಳ್ಳುತ್ತಾನೆ. ತದನಂತರ ಆ ರೋಟಿಯನ್ನು ಬೇಯಿಸಿ ಪಕ್ಕಕ್ಕೆ ತೆಗೆದುಕೊಂಡು ನಂತರ ತವಾ ಮೇಲೆ ಬೇಯಿಸಿರುವ ಹಲವಾರು ತರಕಾರಿಗಳನ್ನು ಮತ್ತು ನೂಡೆಲ್ಸ್, ಹಾಗೂ ಹಲವು ಸಾಸ್‍ಗಳನ್ನು ಮಿಶ್ರಣ ಮಾಡಿ, ಆ ರೋಟಿ ಮೇಲೆ ಹಾಕಿ ರೋಲ್ ಮಾಡಿ ಸಿದ್ದಪಡಿಸಿದ್ದಾನೆ.

ಸದ್ಯ ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೆ ಎಂಟು ಲಕ್ಷಕ್ಕೂ ಅಧಿಕ ಜನರು ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಈ ಬೃಹತ್ ಗಾತ್ರದ ರೋಲ್ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಅನೇಕ ಮಂದಿ ಈ ಚಾಲೆಂಜ್ ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ರೋಲ್ ನೋಡುವ ಮುನ್ನ ನೀವು ಕೆಲವು ಜೀರ್ಣಾ ಕ್ರಿಯೆಯಾಗುವ ಮಾತ್ರೆ ಇಟ್ಟುಕೊಳ್ಳುವುದು ಉತ್ತಮ. ಏಕೆಂದ್ರೆ ರೋಲ್‍ನನ್ನು ನೋಡುತ್ತಿದ್ದಂತೆಯೇ ಹೊಟ್ಟೆ ತುಂಬಿ ಹೋಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

error: Content is protected !!