ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿಯ ಮುನ್ನಿರತ್ನ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮತ ಎಣಿಕೆಯ ಆರಂಭಿಕ ಹಂತದಿಂದಲೂ ಭಾರಿ ಮುನ್ನಡೆ ತೆಗೆದುಕೊಂಡ ಮುನ್ನಿರತ್ನ ಕೊನೆಯ ತನಕ ಹಿಂತಿರುಗಿ ನೋಡಲೇ ಇಲ್ಲ.
ಇನ್ನು ಶಿರಾ ಉಪ ಚುನಾವಣೆಯಲ್ಲಿ ಕೂಡ ಕಮಲ ಅರಳಲಿದೆ. ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ ಕೂಡ ಬಹುತೇಕ ಜಯಭೇರಿ ಬಾರಿಸುವುದು ನಿಶ್ಚಿತವಾಗಿದೆ.
ಒಟ್ಟಾರೆ ರಾಜ್ಯದ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ಇನ್ನು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಅವರಿಗೆ ಈ ಚುನಾವಣೆಯ ಪ್ರತಿಷ್ಠೆಯದಾಗಿತ್ತು. ಆದರೆ ಈ ಅಗ್ನಿ ಪರೀಕ್ಷೆಯಲ್ಲಿ ಡಿ.ಕೆ.ಶಿವಕುಮಾರ್ ಹೀನಾಯ ಸೋಲುಂಡಿದ್ದಾರೆ. ಬಿಹಾರ ಚುನಾವಣೆಯ ರಾಜಕೀಯ ಬೆಳವಣಿಗೆ ಒಂದು ಹಂತಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ರಾಜ್ಯದಲ್ಲಿ ಮತ್ತೊಂದು ರೀತಿಯ ರಾಜಕೀಯ ಬೆಳವಣಿಗೆ ಘಟಿಸಿದರು ಅಚ್ಚರಿಯಿಲ್ಲ.