ಕೂಗು ನಿಮ್ಮದು ಧ್ವನಿ ನಮ್ಮದು

“ಕಾರ್ಗಲ್ ನೈಟ್ಸ್” ಚಿತ್ರದ ಟ್ರೈಲರ್ ರಿಲೀಸ್: ಬೆಳ್ಳಿ ಪರದೆ ಮೇಲೆ ಅನಾವರಣಗೊಳ್ಳಲಿದೆ ಪಶ್ಚಿಮ ಘಟ್ಟದ ಭೂಗತ ಲೋಕ

ಬೆಂಗಳೂರು: 90 ರ ದಶಕದಲ್ಲಿ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆ ಮತ್ತು ಪಶ್ಚಿಮ ಘಟ್ಟದ ಭೂಗತ ಲೋಕವನ್ನು ಬೆಳ್ಳಿಪರದೆ ಮೇಲೆ ಅನಾವರಣಗೊಳಿಸಲು ನಿರ್ದೇಶಕ ದೇವರಾಜ್ ಪೂಜಾರಿ ಅಂಡ್ ಟೀಂ ರೆಡಿಯಾಗಿದೆ.

ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ “ಕಾರ್ಗಲ್ ನೈಟ್ಸ್” ಚಿತ್ರವನ್ನು ತೆರೆ ಮೇಲೆ ತರುತ್ತಿದೆ. ಇಂದು ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

“ಕಾರ್ಗಲ್ ನೈಟ್ಸ್” ಸಿನಿಮಾ 90ರ ದಶಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ರೆಟ್ರೋ ಶೈಲಿಯಲ್ಲಿ ಸಿನಿಮಾ ಇರಲಿದ್ದು, ಟ್ರೈಲರ್ ನಲ್ಲಿ ಅದರ ಅನುಭವವಾಗಲಿದೆ. ಜೊತೆಗೆ ಸುರೇಂದ್ರ ನಾಥ್ ಬಿ.ಆರ್. ಸಂಗೀತ, ಮಲ್ಲಿಕಾರ್ಜುನ್ ಮತ್ತು ತಂಡದ ಕೈಚಳಕ ನಮ್ಮನ್ನ ಪಶ್ಚಿಮ ಘಟ್ಟದ ಭೂಗತ ಲೋಕಕ್ಕೆ ಕರೆದುಕೊಂಡೋಗುತ್ತೆ.

ಈ ಚಿತ್ರದ ಹರ್ಶಿಲ್ ಕೌಶಿಕ್ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಾಗ್ ಯು ಆರ್ ಎಸ್ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾAತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ, ಸೂಚನ್ ಶೆಟ್ಟಿ ಚಿತ್ರದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಇನ್ನು ಚಿತ್ರಕ್ಕೆ ರೋಷನ್ ಲೋಕೇಶ್ ಅವರ ಸಂಕಲನವಿದ್ದು, ಸುರೇಂದ್ರ ನಾಥ್ ಬಿ.ಆರ್. ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಕತೆಯನ್ನು ಸಾಗರ ತಾಲ್ಲೂಕ್ ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ.

ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರದ ಟ್ರೈಲರ್ https://youtube.com/c/A2MUSICOfficial YouTube ಚಾನಲ್ ನಲ್ಲಿ ಇಂದು ಬಿಡುಗಡೆಯಾಗಿದೆ.

error: Content is protected !!