ಕೂಗು ನಿಮ್ಮದು ಧ್ವನಿ ನಮ್ಮದು

ವಿಶ್ವಕಪ್ ಗೆಲುವಿಗೆ ಬೆಳಗಾವಿಯಲ್ಲಿ ಕರವೇ ವಿಶೇಷ ಪೂಜೆ.

ಬೆಳಗಾವಿ: ವಿಶ್ವಕಪ್ ಕ್ರಿಕೇಟ್ ನಲ್ಲಿ ಸತತವಾಗಿ ಎಲ್ಲ ಲೀಗ್ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಸ್ ಪಂದ್ಯವನ್ನೂ ಗೆಲ್ಲುವ ಮೂಲಕ ಪೈನಲ್ ಪಂದ್ಯ ಆಡಲಿರುವ ಟೀಂ ಇಂಡಿಯಾ ತಂಡ ಭಾನುವಾರ ನಡೆಯಲಿರುವ ಫೈನಲ್ ಪಂದ್ಯವನ್ನು ಗೆಲ್ಲಲು ಕರವೇ ಕಾರ್ಯಕರ್ತರು ಬೆಳಗಾವಿಯ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಇರುವ ಗಣೇಶ ಮಂದಿರದಲ್ಲಿ ಶನಿವಾರ ಸಂಜೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಸೇರಿದ ಕರವೇ ಕಾರ್ಯಕರ್ತರು ಗಣೇಶ ಮಂದಿರದಲ್ಲಿ ಭಾರತೀಯ ಕ್ರಿಕೆಟ್ ತಂಡ ನಾಳೆ ನಡೆಯುವ ಫೈನಲ್ ಪಂದ್ಯದಲ್ಲೂ ವಿಜಯಶಾಲಿಯಾಗಿ, ವಿಶ್ವಕಪ್ ನಮ್ಮದಾಗಲಿ ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥನೆ ಮಾಡಿದ್ರು.

ಈ ಸಂಧರ್ಭದಲ್ಲಿ ಮಾತನಾಡಿದ ದೀಪಕ ಗುಡಗನಟ್ಟಿ, ಭಾರತದ ಕ್ರಿಕೆಟ್ ತಂಡ, ವಿಶ್ವಕಪ್ ನಲ್ಲಿ ಉತ್ತಮ ಸಾಧನೆ ಮಾಡಿದೆ. ಪ್ರತಿಯೊಬ್ಬ ಆಟಗಾರನ ಶ್ರಮದಿಂದ ತಂಡ ಫೈನಲ್ ತಲುಪಿದೆ. ಎಲ್ಲ ಆಟಗಾರರ ಶ್ರಮಕ್ಕೆ ಫಲ ಸಿಗಲಿದೆ. ವಿಶ್ವಕಪ್ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಗಣೇಶ್ ರೋಕಡೆ, ಸುರೇಶ ಗವಣ್ಣವರ, ಹೊಳೆಪ್ಪ ಸುಳದಾಳ, ಶಿವಾನಂದ ತಂಬಾಕಿ, ವಿನಾಯಕ ಬೋವಿ, ನಾಗರಾಜ್ ಲಕ್ಕಪ್ಪಗೋಳ, ಗಿರೀಶ್ ಪಾಟೀಲ, ಅಮೀತ್ ಕಿತ್ತೂರು, ಅರ್ಜುನ್ ಕಾಂಬಳೆ, ವಿರೇಶ್ ಹುಣಶೀಮರದ ಮೊದಲಾದವರು ಉಪಸ್ಥಿತರಿದ್ದರು.

error: Content is protected !!