ಕೂಗು ನಿಮ್ಮದು ಧ್ವನಿ ನಮ್ಮದು

ಕಾಂತಾರ ಸಿನಿಮಾಗಾಗಿ ಸಿಂಗಾರ ಸಿರಿ ಸಪ್ತಮಿ ಗೌಡ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರ ನಿರ್ವಹಿಸಿರುವ ಸಪ್ತಮಿ ಗೌಡ ಕರಾವಳಿ ಚೆಲುವೆಯಾಗಿ ಯುವಕರ ಮನ ಕದ್ದಿದ್ದಾರೆ. ಮೂಲತಃ ಬೆಂಗಳೂರಿನವರಾದ ಸಪ್ತಮಿ, ಈ ಹಿಂದೆಯೂ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದರು. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಅಷ್ಟೊಂದು ನೇಮ್‌ ಫೇಮ್‌ ಬಂದಿರಲಿಲ್ಲ.

ಕಾಂತಾರ ಸಿನಿಮಾದಲ್ಲಿನ ಸಿಂಪಲ್‌ ಲುಕ್‌ನಿಂದಾಗಿ ಸದ್ಯ ಎಲ್ಲ ಹುಡುಗರ ಹೃದಯ ಆವರಿಸಿದ್ದಾರೆ ನಟಿ ಸಪ್ತಮಿ ಗೌಡ. ಇದೀಗ ಸಪ್ತಮಿ ಗೌಡ ಅವರಿಗೆ ತಮ್ಮದೇ ಆದ ಫ್ಯಾನ್‌ ಬೇಸ್‌ ಕೂಡ ಕ್ರಿಯೇಟ್‌ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ ಮೂಲಕ ಸಪ್ತಮಿ ಗೌಡ ಅವರು ರಿಷಬ್‌ ಶೆಟ್ಟಿ ಕಣ್ಣಿಗೆ ಬಿದ್ದಿದ್ದರು. ಅವರ ಫೋಟೋ ನೋಡಿ ಮೆಚ್ಚಿಕೊಂಡಿ ಅವರ ಲುಕ್ ಟೆಸ್ಟ್, ಸ್ಕ್ರೀನ್ ಟೆಸ್ಟ್ ಬಳಿಕ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿದರು.
ಕಾಂತಾರ ಸಿನಿಮಾದಲ್ಲಿನ ಪಾತ್ರಕ್ಕಾಗಿ ಸಪ್ತಮಿ ಗೌಡ ಸುಮಾರು 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

error: Content is protected !!