ಕೂಗು ನಿಮ್ಮದು ಧ್ವನಿ ನಮ್ಮದು

೪೦ ಅಲ್ಲ, ನಾಲ್ಕು ಜನ ಶಾಸಕರನ್ನ ಕಾಂಗ್ರೆಸ್ ಸೆಳೆಯಲಿ ನೋಡೋಣ, ಸಾಯೋ ಪಾರ್ಟಿಗೆ ಯಾರ್ ಹೋಗ್ತಾರೆ? ಈಶ್ವರಪ್ಪ


ಕಲಬುರಗಿ: BJPಯ MLAಗಳು ಸಿಂಹ ಇದ್ದ ಹಾಗೇ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ೪೦ ಅಲ್ಲ, ೪ ಜನ ಶಾಸಕರನ್ನು ಕಾಂಗ್ರೆಸ್ ಪಕ್ಷ ಸೆಳೆಯಲಿ ನೋಡೋಣ. ಸಾಯುವ ಪಕ್ಷಕ್ಕೆ ಯಾರಾದ್ರು ಹೋಗ್ತಾರಾ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ K.S ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಒಡೆದು ಹೋದ್ರೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಪೀಸ್, ಪೀಸ್ ಆಗುತ್ತದೆ. ಕಾಂಗ್ರೆಸ್ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡ್ಲಿ. ಕಾಂಗ್ರೆಸ್ ಈ ಹಿಂದೆಯೇ ಮಾಡಿದ ಕೆಲಸಗಳ ಬಗ್ಗೆ ಪಟ್ಟಿಯನ್ನು ಕೊಡ್ಲಿ, ಬಳಿಕ ನಾವು ಕೊಡುತ್ತೇವೆ. ಅನೇಕ ರಾಷ್ಟ್ರಗಳ ಮುಸ್ಲಿಂ ಅವರು BJP ಪಕ್ಷಕ್ಕೆ ಬೆಂಬಲವನ್ನು ಘೋಷಿಸಿದ್ದಾರೆ.

JDS ಪಕ್ಷದ ಮುಸ್ಲಿಂರನ್ನು ಚುನಾವಣೆಗೆ ನಿಲ್ಲಿಸಿದ್ರೆ ಕಾಂಗ್ರೆಸ್‍ಗೆ ಭಯವಾಗುತ್ತದೆ ಎಂದ್ರು.
ಈಶ್ವರಪ್ಪ ತಂಟೆಗೆ ನಾನು ಹೋಗುವುದಿಲ್ಲ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಏನು ಮಾತನಾಡುತ್ತೇನೆ ಅಂತ ಅವರಿಗೆ ಗೊತ್ತಿದೆ. ಅದಕ್ಕಾಗಿ ಅವರು ನನ್ನ ತಂಟೆಗೆ ಬರಲ್ಲ. ಇನ್ನಾದ್ರು ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ.

ಡಿಕೆಶಿಯನ್ನು ಯಾವ ಹುಚ್ಚ ಆಸ್ಪತ್ರೆಗೆ ಸೇರಿಸಬೇಕು. ೪೦ ಜನ ಶಾಸಕರು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುತ್ತಾರೆ ಅಂತ ಹೇಳುತ್ತಾರೆ. ೪ ಜನ ಶಾಸಕರು ಸಹ ಹೋಗುವುದಿಲ್ಲ. ಸಾಯುವ ಪಾರ್ಟಿಗೆ ಯಾರು ಹೋಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ರು. ಬಹುತೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಡಿಪಾಜಿಟ್ ಕಳೆದುಕೊಳ್ಳುತ್ತಾರೆ. ಚುನಾವಣೆ ಬಂದ್ರೆ ಕಾಂಗ್ರೆಸ್‍ನವರು ನಡುಗಿ ಹೋಗುತ್ತಾರೆ. ಬೇರೆ ಮನೆಯವರನ್ನು ಹುಡುಕಿಕೊಂಡು ಬಂದು ಟಿಕೆಟ್ ನೀಡುತ್ತಾರೆ. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರೇ ಇಲ್ವಾ? ೨ ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ರು.

ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ತುಂಬಾ ಗೌರವ ಇದೆ. ಖರ್ಗೆ ಸುಮ್ಮನೆ ಏನೂ ಮಾತಾನಾಡುವುದಿಲ್ಲ. ಆದ್ರೆ ವಿಶ್ವವೇ ಮೆಚ್ಚಿದ ನಾಯಕ ಮೋದಿ ಬಗ್ಗೆ ಚಿಲ್ಲರೆ ವ್ಯಕ್ತಿ ಅಂತಾ ಮಾತಾಡಿದ್ದಾರೆ.ವಿಶ್ವ ನಾಯಕನ ಬಗ್ಗೆ ಚಿಲ್ಲರೆ ಎಂದ್ರೆ ವಿಶ್ವದ ಜನ ಏನಂತಾರೆ? ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಭದ್ರತಾ ಸದಸ್ಯತ್ವ ಸಿಕ್ಕಿದೆ. ಕೇಂದ್ರ ಸಂಪುಟದಲ್ಲಿ ೨೭ ಜನ ದಲಿತರಿಗೆ ಸಚಿವ ಸ್ಥಾನ ಮೋದಿ ನೀಡಿದ್ದಾರೆ. ಈ ಹಿಂದಿನ ಪ್ರಧಾನಿಗಳು ವಿದೇಶಕ್ಕೆ ಹೋದಾಗ ಸಾಲ ಕೇಳಲು ಭಾರತ ಪ್ರಧಾನಿ ಬಂದಿದ್ದಾರೆ ಅಂತಿದ್ರು. ಪ್ರಧಾನಿ ನರೇಂದ್ರ ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಮೋದಿ ಬಂಗಾರದ ಗಟ್ಟಿ. ರಾಜ್ಯದಲ್ಲಿ ೨೭ ಸಂಸದರನ್ನು ಆಯ್ಕೆ ಮಾಡಿದ ಜನರು ಚಿಲ್ಲರೆನಾ? ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಈಶ್ವರಪ್ಪ ಹರಿಹಾಯಿದ್ದಾರೆ.

error: Content is protected !!