ಕೂಗು ನಿಮ್ಮದು ಧ್ವನಿ ನಮ್ಮದು

ರಾಷ್ಟ್ರಭಕ್ತ ಮುಸ್ಲಿಮರು BJPಯಲ್ಲೆ ಇದ್ದಾರೆ: ಕೆ.ಎಸ್ ಈಶ್ವರಪ್ಪ

ಬಾಗಲಕೋಟೆ: ಮುಸ್ಲಿಂ, ಕ್ರಿಶ್ಚಿಯನ್ ವೋಟುಗಳ ಮೇಲೆ ಕಣ್ಣಿಟ್ಟು RSSಗೆ ಬೈದ್ರೆ ತಮಗೆ ವೋಟು ಕೊಡುತ್ತಾರೆ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್,JDS ಇವೆ ಈಗ ದಲಿತರು, ಹಿಂದುಳಿದವರ ಜೊತೆ ಬಂದಾಯಿತು. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೆ ಇದ್ದಾರೆ. ಉಳಿದ ಮುಸ್ಲಿಮರು ನಮ್ಮ ಜೊತೆ ಬರುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ರು. ನಗರದಲ್ಲಿ ಮಾದ್ಯಮದವರ ಜೊತೆಗೆ ಮಾತನಾಡಿದ ಈಶ್ವರಪ್ಪ, ಮೊದಲು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳು ಪಾಕಿಸ್ತಾನ ಜೊತೆ ಇದ್ದವು. ಈಗ ಮೋದಿ ಪ್ರಧಾನಿಯಾದ ನಂತರ ಇಡೀ ವಿಶ್ವವೇ ಮೋದಿ ಜೊತೆ ಇದೆ.

ಇವತ್ತು ಪಾಕಿಸ್ತಾನ ಒಂಟಿಯಾಗಿದೆ. ಇವರಿಗೇನು ಕಲ್ಪನೆ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.
ಇದೇ ವೇಳೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹೆಚ್‍.ಡಿ.ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, RSS ಬಗ್ಗೆ ನೆಹರು, ಇಂದಿರಾಗಾಂಧಿ ಮಾತಾಡಿದಾಗ ಅವರನ್ನೇ ಬಿಟ್ಟಿಲ್ಲ. ಇನ್ನು ಇವರ್ಯಾರ್ರಿ ನಮ್ಮ ಲೆಕ್ಕಕ್ಕೆ. RSS ದೇಶದ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ದೊಡ್ಡ ಶಕ್ತಿ.

RSS ಇಲ್ಲಾ ಅಂದಿದ್ರೆ ಈ ದೇಶ ಪಾಕಿಸ್ತಾನ ಆಗಿ ಹೋಗಿರ್ತಿತ್ತು ಎಂದು ಕೆ.ಎಸ್.ಈಶ್ವರಪ್ಪ ಕೆಂಡ ಕಾರಿದರು. IAS, IPS ಮೂಲಕ ಆಡಳಿತ ನಡೆಸುತ್ತೆ. ಇದು ಮೆದುಳಿಗೆ ಪೊರೆ ಬಂದಿರುವವರು ಹೇಳುವ ಮಾತು. ಎಲ್ಲಾ ಕ್ಷೇತ್ರಗಳಲ್ಲೂ RSS ಇದೆ. RSS ಕುಛ್ ಭಿ ನಹೀ ಕರೇಗಾ, ಲೇಕಿನ್ ಸ್ವಯಂ ಸೇವಕ್ ಸಬ್ ಕುಛ್ ಕರೇಗಾ. ಯಾರೆಲ್ಲ ಇಲ್ಲಿ ಸಂಸ್ಕಾರ ತಗೊಳ್ತಾರೋ ಅವರು, ಅವರವರ ಕ್ಷೇತ್ರದಲ್ಲಿ ರಾಷ್ಟ್ರಭಕ್ತಿ ಬೆಳೆಸಿ ದೇಶ ಕಟ್ಟುವ ಕೆಲಸ ಮಾಡ್ತಾರೆ ಎಂದು ಈಶ್ವರಪ್ಪ ಹೇಳಿದರು.

error: Content is protected !!