ಬಾಗಲಕೋಟೆ: BJP ಅಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ K.S. ಈಶ್ವರಪ್ಪನವರು ಬಾಗಲಕೋಟೆಯಲ್ಲಿ ಹೇಳಿದ್ರು ಇನ್ನೂ ವಲಸಿಗರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರಿರುವ ಅವರು, ಅಸಮಾಧಾನ ಏನು ಇಲ್ಲ. ಅದನ್ನು ಕೇಂದ್ರ ನಾಯಕರು ಬಗೆಹರಿಸುತ್ತಾರೆ. ಜೊತೆಗೆ ನಮ್ಮ ಪಕ್ಷ ಸ್ವಚ್ಛವಾಗಿದೆ. ನಮ್ಮಲ್ಲಿ ಮುಂಚೆ ಬಂದವರು ಮತ್ತು ಆಮೇಲೆ ಬಂದವರು ಎಂಬ ಯಾವುದೇ ಭೇದಭಾವ ವಿಲ್ಲ. ಮತ್ತು ೧ ವೇಳೆ ೧೭ ಜನ ಕಾಂಗ್ರೆಸ್ ಹಾಗೂ JDS ಸದಸ್ಯರು ಬರದಿದ್ರೆ ನಮ್ಮ ಪಕ್ಷ ಸರ್ಕಾರಕ್ಕೆ ಬರುತ್ತಿರಲಿಲ್ಲ ಎಂದಿದ್ರು.
ಇನ್ನೂ BJP ಹಾಲು, ಹೊರಗಿನಿಂದ ಬಂದವರು ಜೇನು, ಎರಡು ಸೇರಿ ಹಾಲು ಜೇನು ಇದ್ದಂತೆ ನಾವು ಇದ್ದೆವೆ ಎಂದಿದ್ದಾರೆ. ಇನ್ನೂ ಹಂತವರನ್ನು ತೆಗೆದುಕೊಂಡು ನಮ್ಮ ಪಕ್ಷ ಈ ಮಟ್ಟಿಗೆ ಬೆಳೆದಿದೆ. ಇನ್ನೂ ಯಾವುದೇ ಕಾರಣಕ್ಕೂ ನಮ್ಮಲ್ಲಿ ಗೊಂದಲಗಳಿಲ್ಲ. ನಾವು ಎಲ್ಲರೂ ಒಗಟ್ಟಾಗಿ ಇದ್ದೇವೆ. ಇನ್ನೂ ನಾವೆಲ್ಲರೂ ಪಕ್ಷವನ್ನು ಒಗಟ್ಟಿನಿಂದ ಕಟ್ಟಿಕೊಂಡು ಹೋಗುತ್ತೇವೆ ಎಂಬ ಆತ್ಮ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಇನ್ನೂ ಮುಖ್ಯಮಂತ್ರಿ ಆಗಿ ಎಂದು ಬೆಂಬಲಿಸಿದವರ ಕುರಿತು ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪನವರ ಜೊತೆಗೆ ಬೆಳೆದಿದ್ದೀರಾ, ಅವರ ಬಳಿಕ ನೀವೇ ಮುಖ್ಯಮಂತ್ರಿ ಆಗಿ ಎಂದು ಹಲವು ವಿಶ್ವಾಸಿಗಳು ನನಗೆ ಫೋನ್ ಮಾಡಿ ಕೇಳಿಕೊಂಡಿದ್ದಾರೆ ಎಂದಿದ್ದಾರೆ.
ಇನ್ನೂ ಪಕ್ಷದ ಹಿರಿಯರು, ಹಿಂದುಳಿದ ನಾಯಕರು, ಪಕ್ಷವನ್ನು ಕಟ್ಟಿದ್ದೀರಿ, ಜೊತೆಗೆ ನಿಷ್ಠಾವಂತ ಕಾರ್ಯಕರ್ತರು ನೀವು, ಜೊತೆಗೆ ಸಿಎಂ ಇಲ್ಲವೇ, DCMಆಗಿ ಎಂದು ನನಗೆ ಹಲವಾರು ಆಪ್ತರು ಫೋನ್ ಮಾಡಿ ಹೇಳುತ್ತಿದ್ದಾರೆ. ಇನ್ನೂ ಸ್ವಾಮೀಜಿಗಳು ಸೇರಿ ಅನೇಕರು ಹೋರಾಟ ಮೆರವಣಿಗೆಗಳನ್ನು ಮಾಡಿದ್ದಾರೆ. ಹಾಗಾಗಿ ನನಗೆ ಸಂತೋಷವಿದೆ ಎಂದಿದ್ದಾರೆ. ಇನ್ನೂ BJP ಶ್ರೀರಾಮನ ಆದರ್ಶ ಮತ್ತು ಶ್ರೀಕೃಷ್ಣನ ತಂತ್ರಗಾರಿಕೆಯಿಂದ ಕೂಡಿದೆ. ಹಾಗಾಗಿ ನನಗೆ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ನಾವು ೪ ಜನ MLA ಗಳಿದ್ದೇವು ಜೊತೆಗೆ ನಾನು ರಾಜ್ಯಾಧ್ಯಕ್ಷನಾಗಿದ್ದೆ ಎಂದಿದ್ದಾರೆ.
ಜೊತೆಗೆ ನಮ್ಮ ಪಕ್ಷ ಒಬ್ಬ ವ್ಯಕ್ತಿ ಮೇಲೆ ನಿಂತಿಲ್ಲ. ಇದು ಸಿದ್ಧಾಂತ, ಆದರ್ಶಗಳ ಮೇಲೆ ನಿಂತಿದೆ. ನಮ್ಮ ಪಕ್ಷದ ಸಿದ್ಧಾಂತಕ್ಕೆ ಬೆಲೆ ಸಿಗಬೇಕೇ ವಿನಃ ವ್ಯಕ್ತಿಗಲ್ಲ. ಇನ್ನೂ ಈ ದಿಕ್ಕಿನಲ್ಲಿ ತೀರ್ಮಾನಗಳು ಆಗುತ್ತಿವೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಇನ್ನೂ ಮುಖ್ಯಮಂತ್ರಿ ಬದಲಾವಣೆಯನ್ನು ಕುರಿತು ಮಾತನಾಡಿದ ಅವರು, ೭೫ ವರ್ಷ ದಾಟಿದವರಿಗೆ ರಾಜಕೀಯ ಅವಕಾಶಗಳು ಕಮ್ಮಿ ಮಾಡಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕೆಂದು ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಎಂದ್ರು
ಇನ್ನೂ ಒಬ್ಬರ ಕೈಯಲ್ಲಿ ಮಾತ್ರವೇ ರಾಜ್ಯದ ಆಳ್ವಿಕೆ ಬೇಡವೆಂದು ನಾವು ಎಲ್ಲರೂ ಸೇರಿ ಈ ನಿರ್ಧಾರವನ್ನು ಮಾಡಿದ್ದೇವೆ. ಇನ್ನೂ ಹೊಸ ರೀತಿಯ ಪ್ರಯೋಗಗಳಿಗೆ ನಾವು ಹೊಸ ಹೊಸ ಅವಕಾಶಗಳನ್ನು ಕೊಡಬೇಕೆಂದು ನಮ್ಮ ಪಕ್ಷವು ಬಂದಿದೆ ಎಂದಿದ್ದಾರೆ. ಇನ್ನೂ ನಮ್ಮ ಪಕ್ಷದ ಕೆಲವು ಜನ ರಾಷ್ಟ್ರೀಯ ಅಧ್ಯಕ್ಷರಾದ್ದಾರೆ. ಎಂದು ಹೇಳಿದರು.
ಇನ್ನೂ ಅವರನ್ನು ಹುಡುಕಿ ತೆಗೆಯುವ ಪರಿಸ್ಥಿತಿಯು ನಮಗೆ ಈಗ ಎದುರಾಗಿದೆ. ಜೊತೆಗೆ ನಮ್ಮ ಪಕ್ಷದಲ್ಲಿ ವ್ಯಕ್ತಿಗೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ಎಂದಿದ್ದಾರೆ. ಇನ್ನೂ ಯತ್ನಾಳ್ ಅವರ ವಿಚಾರವಾಗಿ ಮಾತನಾಡಿರುವ ಇವರು, ಅವರ ಅಭಿಪ್ರಾಯಗಳನ್ನು ಪಕ್ಷಕ್ಕೆ ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಮಾಧ್ಯಮಕ್ಕೆ ಹೇಳಿಕೊಂಡ್ರೆ ಯಾವುದೇ ಪ್ರಯೋಜನಗಳಿಲ್ಲ. ಎಂದು ಹೇಳಿದ್ದಾರೆ.