ದಾವಣಗೆರೆ: ಸದ್ಯಕ್ಕೆ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಯುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಡಿಸೆಂಬರ್ವರೆಗೂ ಚುನಾವಣೆ ನಡೆಯಲ್ಲ. ಕೊರೊನಾ ಮೂರನೇ ಅಲೆ ಭೀತಿಯಿರುವ ಹಿನ್ನೆಲೆ ಸದ್ಯಕ್ಕೆ ಚುನಾವಣೆ ಬೇಡವೆಂದು ನಿರ್ಧರಿಸಲಾಗಿದೆ ಎಂದು ದಾವಣಗೆರೆಯಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಬಿಜೆಪಿ ಒಂದು ಕುಟುಂಬ. ನಮ್ಮ ಅಭಿಪ್ರಾಯ ತಿಳಿಸುವುದಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವಕಾಶ ನೀಡಿದ್ದರು ಎಂದು ತಿಳಿಸಿದ ಅವರು ಇದೊಂದು ವಿಶೇಷ ಪದ್ಧತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಡಿಸೆಂಬರ್ ವರೆಗೂ ಯಾವುದೇ ಚುನಾವಣೆ ಬೇಡ ಎಂಬ ಅಭಿಪ್ರಾಯವನ್ನು ಸಚಿವ ಈಶ್ವರಪ್ಪ ವ್ಯಕ್ತಪಡಿಸಿದರು.