ಕೂಗು ನಿಮ್ಮದು ಧ್ವನಿ ನಮ್ಮದು

ಜ್ಯೋತಿ ಬದಾಮಿ ಅವರಿಗೆ ವಿಶಿಷ್ಟ ಲೇಖಕಿ ಪ್ರಶಸ್ತಿ

ಬೆಳಗಾವಿ: ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇವರು 2019 ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದ್ದು ಬೆಳಗಾವಿ ಜಿಲ್ಲೆಯಿಂದ ಲೇಖಕಿ ಜ್ಯೋತಿ ಬದಾಮಿ ಅವರು ವಿಶಿಷ್ಟ ಲೇಖಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ್ಯೋತಿ ಬದಾಮಿ ಯವರು 10 ಕ್ಕಿಂತ ಅಧಿಕ ವೈವಿಧ್ಯಮಯ ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಂಕಣ ಬರಹಗಾರೂ ಆಗಿದ್ದಾರೆ.

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಅಖಿಲ ಭಾರತ ಕವಿಯತ್ರಿಯರ ಸಂಘಟನೆಯ ಉಪಾಧ್ಯಕ್ಷೆ, ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಮಹೋತ್ಸವದ ಗೌರವ ಸದಸ್ಯೆಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಜ್ಯೋತಿ ಬದಾಮಿ ಯವರು ವಿಶಿಷ್ಟ ಲೇಖಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕಾಗಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಲಿಂಗಾಯತ ಮಹಿಳಾ ಸಮಾಜ, ವೀರಶೈವ ಮಹಾಸಭಾ ಬೆಳಗಾವಿ ಘಟಕ ಹಾಗೂ ಸಾಹಿತ್ಯಾಭಿಮಾನಿಗಳು ಅಭಿನಂದಿಸಿ ಹಾರೈಸಿದ್ದಾರೆ.

error: Content is protected !!