ಕೂಗು ನಿಮ್ಮದು ಧ್ವನಿ ನಮ್ಮದು

ಬಿಎಸ್ವೈ ಉತ್ತರಾಧಿಕಾರಿಯಾಗಿ ಜೋಷಿ! ಸಿಎಂ?

ಬೆಂಗಳೂರು: ಇಂದು ರಾಜೀನಾಮೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉತ್ತರಾಧಿಕಾರಿನ್ನಾಗಿ ಯಾರನ್ನು ಮಾಡಬಹುದು ಎನ್ನುವ ವಿಚಾರದ ಕುರಿತು, ರಾಜ್ಯ ರಾಜಕಾರಣದಲ್ಲಿ ಮತ್ತು ರಾಜ್ಯದಲ್ಲಿ ಬಾರಿ ಕುತೂಹಲ ಮೂಡಿಸಿದೆ,

ಆದರೆ ಬಿಜೆಪಿ ಹೈಕಮಾಂಡ್ ಯಾರನ್ನು ಪಟ್ಟಕ್ಕೆ ಕೂರಿಸಲಿದ್ದಾರೆ ಎನ್ನುವುದು ಮಾತ್ರ ರಹಸ್ಯವಾಗಿ ಉಳಿಸಿದೆ.ಇನ್ನೂ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿರುವ ಬಿಜೆಪಿ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಹ್ಲಾದ್ ಜೋಶಿ ಅವರನ್ನು ಹೈಕಮಾಂಡ್ ಸಿಎಂ ಮಾಡಬಹುದು ಎಂದು ಚರ್ಚೆ ನಡೆಯುತ್ತಿದೆ, ಜೋಶಿ ಅವರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದ ಇತರೇ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಜೋಶಿ ಅವರು ದಿವಂಗತ ಅನಂತ್ ಕುಮಾರ್ ಅವರ ಗರಡಿಯಲ್ಲಿ ಪಳಗಿದವರು, ಅಲ್ಲದೇ ಪ್ರಧಾನಮಂತ್ರಿ ಮೋದಿ ಅವರಿಗೆ ಇವರನ್ನು ಕಂಡರೆ ಅಚ್ಚು-ಮೆಚ್ಚು, ಬಿಜೆಪಿ ಅತ್ಯಂತ ನಿಷ್ಟಾವಂತ ಕಾರ್ಯಕರ್ತ ಹಾಗೂ ತಮ್ಮ ಬದ್ದತೆ ಮತ್ತು ತ್ಯಾಗದಿಂದ ಪಕ್ಷದಲ್ಲಿ ಒಳ್ಳೆಯ ಹೆಸರು ಮಾಡಿರುವ ಜೋಷಿ ಅವರನ್ನೇ ಹೈಕಮಾಂಡ್ ಮುಖ್ಯಮಂತ್ರಿ ಮಾಡುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

error: Content is protected !!