ನಿಪ್ಪಾಣಿ: ನಿಪ್ಪಾಣಿ ಮತಕ್ಷೇತ್ರದ ಅಪ್ಪಾಚಿವಾಡಿ ಗ್ರಾಮದಲ್ಲಿ, ವಿಧಾನಸಭಾ ಚುನಾವಣೆ ನಿಮಿತ್ತ ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯ ಗೋಪಿಚಂದ್ ಪದಲ್ಕರ್ ಅವರ ನೇತೃತ್ವದಲ್ಲಿ, ಹಾಲುಮತ ಸಮುದಾಯದೊಂದಿಗೆ ಪ್ರಚಾರ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಇದಕ್ಕೂ ಮೊದಲು ಗ್ರಾಮ ದೇವರಾದ ಹಾಲಸಿದ್ದನಾಥ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಾಯಿತು.
ಪುರಾತನ ಪರಂಪರೆಯ ಹಾಲುಮತ ಸಮಾಜದ ಏಳಿಗೆಗೆ ನಮ್ಮ ಸರ್ಕಾರ ಒತ್ತು ನೀಡಿದೆ. ಈ ಸಮಾಜ ಕೂಡ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂಬುವು ನನ್ನ ಹಂಬಲ. ಇದಕ್ಕಾಗಿ ಬಿಜೆಪಿ ಮತ ನೀಡಿ, ನನಗೆ ಆಶೀರ್ವದಿಸಿ ಎಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಧನಂಜಯ ಮಹಾಡಿಕ, ನಿಪ್ಪಾಣಿ ಮತಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಡಾ. ಅಜಿತ ಘೋಪಚಾಡೆ, ಬಿಜೆಪಿ ಪಂಜಾಬ್ ರಾಜ್ಯದ ಮುಖಂಡರಾದ ಧಿರಜ ಕುಮಾರ, ಗುರುಶರಣ ಸಿಂಗ್, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಹಾಲಸಿದ್ದನಾಥ ದೇವಸ್ಥಾನ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಮತದಾರ ಬಾಂಧವರು ಉಪಸ್ಥಿತರಿದ್ದರು.