ಬೆಂಗಳೂರು: ದೊಡ್ಡ ದೊಡ್ಡ ರಾಜಕಾರಣಿಗಳು ನನ್ನ ವಿರುದ್ಧವಾಗಿ ದೂರು ಕೊಟ್ಟಿದ್ದಾರೆ ಎಂಬ ಅನುಮಾನ ನನಗೆ ಎದ್ದು ಕಾಣುತ್ತಿದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಹೊಸ ಬಾಂಬ್ ಸಿಡಿಸಿದ್ರು.
ಇನ್ನೂ ದೊಡ್ಡ ದೊಡ್ಡ ರಾಜಕಾರಣಿಗಳು ನನ್ನ ಮೇಲೆ ದೂರು ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ದೂರು ಕೊಟ್ಟಿಲ್ಲ. ಜೊತೆಗೆ ನಾನು ಬಿಟ್ಟು ಬಂದಿರೋ ಪಕ್ಷದವರು ಈ ಕೆಲಸ ಮಾಡಿರುವುದರ ಅನುಮಾನ ನನಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಕಡೆ ಶಾಸಕರು ಬೆರಳು ಮಾಡಿದ್ರು. ಇನ್ನೂ ಜಾರಿ ನಿರ್ದೇಶನಾಲಯ ಇಡಿ ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಜೊತೆಗೆ ೧೦ ದಿನಗಳ ಕಾಲಾವಕಾಶವನ್ನು ಪಡೆದುಕೊಳ್ಳಲಾಗಿದೆ.
ಇನ್ನೂ ೧೦ ದಿನದಲ್ಲಿ ದಾಖಲೆಗಳನ್ನ ಅಕೌಂಟ್ ಮೂಲಕ ಕಳಿಸಿಕೊಡಿ ಎಂದು ಹೇಳಿದ್ರು. ಇನ್ನೂ ದಾಳಿಯ ವೇಳೆ ಶೇಕಡ ೯೦ ರಷ್ಟು ದಾಖಲೆಗಳನ್ನ ಕೊಡಲಾಗಿದೆ. ಕೆಲವೊಂದು ದಾಖಲೆಗಳು ಬ್ಯಾಂಕ್ ನಲ್ಲಿದೆ ಅದನ್ನು ಸಹ ಕೊಡಬೇಕು, ಜೊತೆಗೆ ಪ್ರಾಪರ್ಟಿ ವಿಚಾರವಾಗಿ ಇಡಿ ದಾಳಿ ನಡೆಸಿದೆ ಎಂದ್ರು. ಇತ್ತ ಶಾಸಕರಿಗೆ ಇಡಿ ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ನೋಟಿಸ್ ಬೆನ್ನಲ್ಲೆ ಜಮೀರ್ ಪ್ರಖ್ಯಾತ ವಕೀಲರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇನ್ನೂ ನನ್ನ ಇಡಿ ಕೇಸನ್ನ ನೀವೇ ನಿರ್ವಹಿಸಬೇಕು ಎಂದು ಜಮೀರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಖ್ಯಾತ ವಕೀಲ ಕಪಿಲ್ ಸಿಬಲ್ ಅವರಿಗೆ ಹೇಳಿದ್ದಾರಂತೆ. ಅಲ್ಲದೆ ಈಗಾಗಲೇ ಕಪಿಲ್ ಸಿಬಲ್ ಜೊತೆ ಫೋನ್ ಕಾಲ್ ಸಹ ಮಾಡಿ ಮಾತನಾಡಿದ್ದಾರಂತೆ. ಇನ್ನೂ ಈ ವೇಳೆ ಸಿಬಲ್ ಅವರು ಕೇಸ್ ಡೀಟೈಲ್ಸ್ ಹಾಗೂ ಹಲವು ದಾಖಲೆಗಳನ್ನು ಕೇಳಿದ್ದಾರೆ. ಜೊತೆಗೆ ಕೇಸ್ ಸ್ಟಡಿ ಮಾಡಿ ಮುಂದಿನ ವಿಚಾರ ಚರ್ಚಿಸುವುದಾಗಿ ಕಪಿಲ್ ಸಿಬಲ್ ಹೇಳಿದ್ದಾರೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ಜಮೀರ್ ಪರವಾದ ವಕೀಲ ಜಬೀ ಅವರು ಕಪಿಲ್ ಸಿಬಲ್ ಗೆ ನೀಡುವ ದಾಖಲೆಗಳೊಂದಿಗೆ ದೆಹಲಿ ತಲುಪಿದ್ದಾರೆ. ಇನ್ನೂ ಈ ದಾಖಲೆಗಳನ್ನ ಪರಿಶೀಲಿಸಿದ ತದ ನಂತರ ಕೇಸ್ ನಡೆಸುವ ಬಗ್ಗೆ ಕಪಿಲ್ ಸಿಬಲ್ ತಮ್ಮ ಅಭಿಪ್ರಾಯವನ್ನು ತಿಳಿಸಲಿದ್ದಾರೆ ಎನ್ನಲಾಗಿದೆ.