ಕೂಗು ನಿಮ್ಮದು ಧ್ವನಿ ನಮ್ಮದು

ಬಂಧನದ ಭೀತಿಯಲ್ಲಿರುವ ಜಮೀರ್ ಅಹ್ಮದ್, ರೋಷನ್ ಬೇಗ್

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಜಾರಿ ನಿರ್ದೇಶನಾಲಯದ ಬಂಧನದ ಭೀತಿಯಲ್ಲಿದ್ದಾರೆ. ಇನ್ನೂ ಇವತ್ತು ಮುಂಜಾನೆ ಇವರಿಬ್ಬರ ಮನೆಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಐ.ಎಂ.ಎ ಪ್ರಕರಣದ ಪ್ರಮುಖ ಆರೋಪಿಯಾದ ಮನ್ಸೂರ್ ಖಾನ್ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಹತ್ತಿರದಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿದ್ರು. ಜೊತೆಗೆ ೨.೫ ಕೋಟಿ ರೂಪಾಯಿ ಬಾಳುವ ಆಸ್ತಿಯನ್ನು ೫ ಕೋಟಿ ರೂಪಾಯಿಗೆ ಮಾರಟ ಮಾಡಿದ್ರು. ಇನ್ನೂ ಇದೇ ನಿವೇಶನ ಜಮೀರ್ ಅಹ್ಮದ್ಗೆ ಕಂಟಕವಾಗುತ್ತಾ ಎನ್ನುವ ಪ್ರಶ್ನೆ ಈಗ ಎಲ್ಲೆಡೆ ಮನೆ ಮಾಡಿದೆ.

ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ SIT ಹಾಗೂ CBI ವಿಚಾರಣೆಗೂ ಜಮೀರ್ ಅಹ್ಮದ್ ಹಾಜರಾಗಿದ್ರು. ಇನ್ನೂ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಹತ್ತಿರದಲ್ಲಿರುವ ನೂತನ ಬಂಗಲೆ, ಮತ್ತು UB ಸಿಟಿಯಲ್ಲಿರು ಫ್ಲ್ಯಾಟ್, ಜೊತೆಗೆ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ ಕಚೇರಿ ಹಾಗೂ ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವ ಮಾಹಿತಿಯು ಮಾದ್ಯಮದವರಿಗೆ ಲಭ್ಯವಾಗಿದೆ. ಇನ್ನೂ ಇತ್ತ ಜಮೀರ್ ಅಹ್ಮದ್ ಮನೆಯ ದಾಳಿಯ ಬೆನ್ನಲ್ಲೇ KPCC ಅಧ್ಯಕ್ಷರಾದ ಡಿ.ಕೆ.ಶಿ ಅವರು ಇಂದು ಮಧ್ಯಾಹ್ನ ೧೨ ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿದೆ.

error: Content is protected !!