ಕೂಗು ನಿಮ್ಮದು ಧ್ವನಿ ನಮ್ಮದು

ರಕ್ಕಮ್ಮನಿಗೆ ಸಂಕಷ್ಟ: ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಚಾರ್ಜ್ ಶೀಟ್ ಫೈಲ್, ಬಂಧನದ ಸುಳಿಯಲ್ಲಿ ನಟಿ?

ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಂಕಷ್ಟ ಹೆಚ್ಚಾಗಿದೆ. ಅವರನ್ನು ಜಾರಿ ನಿರ್ದೇಶನಾಲಯ ಇಡಿ ಆರೋಪಿಯನ್ನಾಗಿ ಮಾಡಿದೆ. ಜಾಕ್ವೆಲಿನ್ ಸದ್ಯ ಬರೋಬ್ಬರಿ 215 ಕೋಟಿ ರೂ. ಹಣ ವಸೂಲಿ ಮತ್ತು ವಂಚನೆ ಪ್ರಕರಣದ ಆರೋಪಿಯಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಜೊತಗೆ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕಾಗಿ ಇಡಿ ಹಲವಾರು ಬಾರಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಪ್ರಶ್ನಿಸಿದೆ. ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಜಾಕ್ವೆಲಿನ್ ಈಗಾಗಲೇ ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಪ್ರಕರಣದ ಮೊದಲ ಆರೋಪಪಟ್ಟಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಇಡಿ ಪಿಂಕಿ ಇರಾನಿ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು. ಸುಕೇಶ್ ಅವರನ್ನು ಜಾಕ್ವೆಲಿನ್‌ಗೆ ಪರಿಚಯಿಸಿದ್ದು ಪಿಂಕಿ, ಪಿಂಕಿ ಇರಾನಿ ಅವರು ಜಾಕ್ವೆಲಿನ್‌ಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸುಕೇಶ್ ಹಲವು ಮಾಡೆಲ್‌ಗಳು ಮತ್ತು ನಟಿಯರಿಗೆ ಸುಮಾರು 20 ಕೋಟಿ ರೂ. ಖರ್ಚು ಮಾಡಿದ್ದು, ಅನೇಕ ಮಾಡೆಲ್ ಗಳಿಗಾಗಿ ಉಡುಗೊರೆಗಳನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಇನ್ನೂ ಕೆಲವರು ಆತನಿಂದ ಉಡುಗೊರೆ ಸ್ವೀಕರಿಸಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ಚಂದ್ರಶೇಖರ್ ಅವರನ್ನು ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಜಾಕ್ವೆಲಿನ್ ಅವರಿಗೆ ನೀಡಲಾದ 7 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳು ಮತ್ತು ಆಸ್ತಿಯನ್ನು ಅಪರಾಧದ ಆದಾಯವಾಗಿ ಇಡಿ ಏಪ್ರಿಲ್‌ನಲ್ಲಿ ಜಪ್ತಿ ಮಾಡಿತ್ತು. ಫೆಬ್ರವರಿಯಲ್ಲಿ, ಸುಕೇಶ್ ಚಂದ್ರಶೇಖರ್ ತನ್ನ ಸಹಾಯಕಿ ಪಿಂಕಿ ಇರಾನಿ ಮೂಲಕ ಬಾಲಿವುಡ್ ನಟಿಯರಾದ ಭೂಮಿ ಪೆಡ್ನೇಕರ್, ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಇಡಿ ಬಹಿರಂಗಪಡಿಸಿತ್ತು. ಸುಕೇಶ್‌ಗೆ ಪರಿಚಯಿಸಲು ಪಿಂಕಿ ಇರಾನಿ ಕೆಲವು ನಟಿಯರನ್ನು ತಿಹಾರ್‌ಗೆ ಕರೆದೊಯ್ದಿದ್ದರು. ಆದರೆ ಈ ನಟಿಯರ ಗುರುತನ್ನು ಬಹಿರಂಗಪಡಿಸಿಲ್ಲ ಎಂದು ಇಡಿ ಮೂಲಗಳು ತಿಳಿಸಿವೆ. ಪಿಂಕಿ ಆಗಾಗ ನಟಿಯರನ್ನು ಭೇಟಿಯಾಗುತ್ತಿದ್ದರು ಎನ್ನಲಾಗಿದೆ

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣವೇನು? ವಾಸ್ತವವಾಗಿ, ಸುಕೇಶ್ ಚಂದ್ರಶೇಖರ್, ಅವರ ಪತ್ನಿ ಲೀನಾ ಮರಿಯಾ ಪೌಲ್ ಮತ್ತು ಇತರ 6 ಜನರ ವಿರುದ್ಧ 200 ಕೋಟಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಆರೋಪಪಟ್ಟಿ ಸಲ್ಲಿಸಿತ್ತು. ಸುಕೇಶ್, ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರನ್ನು ಜೈಲಿನಿಂದ ಹೊರತರುವ ನೆಪ ನೀಡಿದ್ದರು ಎಂದು ಇಡಿ ಆರೋಪಿಸಿದೆ. ಇದಕ್ಕಾಗಿ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರಿಗೆ 200 ಕೋಟಿಗೂ ಅಧಿಕ ವಂಚನೆ ಮಾಡಿದ್ದಾನೆ. ಅವರು ಕೆಲವೊಮ್ಮೆ ಪಿಎಂಒ, ಕೆಲವೊಮ್ಮೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಸುಕೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಬಂಧನದ ಭೀತಿಯಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಇದ್ದಾರೆ.

error: Content is protected !!