ಶಿವಮೊಗ್ಗ: ಜಿಲ್ಲಾ ಪ್ರವಾಸದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ರಾತ್ರಿ ನಡೆದ RCB ಪಂದ್ಯವನ್ನು ತಮ್ಮ ಕಾರಿನಲ್ಲಿ ಕುಳಿತು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡಿದ್ರು. ಶುಕ್ರವಾರ ರಾತ್ರಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ವೇಳೆಯಲ್ಲಿ ಬಿ.ಎಸ್ ಯಡಿಯೂರಪ್ಪ RCB ಮತ್ತು ಡೆಲ್ಲಿ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಿದ್ರು.
IPL ತಂಡಗಳಲ್ಲಿ RCB ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದ್ದು, ಯಡಿಯೂರಪ್ಪನವರು ಕೂಡ ಕ್ರೀಡಾ ಅಭಿಮಾನಿಗಳಾಗಿದ್ದಾರೆ. ಅದಕ್ಕೆ RCB ಪಂದ್ಯವನ್ನು ನಿನ್ನೆ ಸಂತಸದಿಂದ ವೀಕ್ಷಿಸುತ್ತಿದ್ರು. ಯಡಿಯೂರಪ್ಪ ಉಪಚುನಾವಣೆಯ ಸಲುವಾಗಿ ಪ್ರವಾಸ ಕೈಗೊಂಡಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿಯೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಸಹ ಬಿಎಸ್ವೈ ವ್ಯಕ್ತಪಡಿಸಿದ್ರು.
ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಈ ಹಿನ್ನೆಲೆ ಪ್ರತಿಪಕ್ಷದ ನಾಯಕರು, ಈ ದಾಳಿಯನ್ನು ಬೇಕೆಂದು ಬಿಎಸ್ವೈ ಆಪ್ತರನ್ನೆ ಟಾರ್ಗೆಂಟ್ ಮಾಡಲಾಗುತ್ತಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ರು.