ಚಿಕ್ಕಬಳ್ಳಾಪುರ: ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂಬ ಹೆಸರಿಟ್ಟರೆ ತಪ್ಪೇನು ಎಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ಸಚಿವ ಸುಧಾಕರ್ ಅವರು ಹೇಳಿದ್ರು. ಇನ್ನೂ ಸಿ.ಟಿ.ರವಿಯವರು ಸಹ ಇದೆ ವಿಷಯದ ಬಗ್ಗೆ ಹೇಳಿದ್ದಾರೆ. ಆದ್ರೆ ಸರ್ಕಾರವು ಈ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರವನ್ನು ಮಾಡಿಲ್ಲ. ಇನ್ನೂ ಅನ್ನಪೂರ್ಣೇಶ್ವರಿ ನಮ್ಮೆಲ್ಲರಿಗೂ ತಾಯಿ ಇದ್ದಂತೆ. ಹಾಗಾಗಿ ಇಂದಿರಾ ಕ್ಯಾಂಟಿನ್ ಗೆ ಅನ್ನಪೂರ್ಣೇಶ್ವರಿ ಎಂಬ ಹೆಸರಿಟ್ರೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ಆನಂದ್ ಸಿಂಗ್ ಮತ್ತು MTB ನಾಗರಾಜ್ ಖಾತೆಯ ಸಲುವಾಗಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ ಅವರು, ಈಗಾಗಲೇ ಬೆಳ್ಳಿಗ್ಗೆ ಆನಂದ್ ಸಿಂಗ್ ಜೊತೆಗೆ ಮುಖ್ಯಮಂತ್ರಿಯವರು ಚರ್ಚೆ ಮಾಡಿದ್ದಾರೆ. ಇನ್ನೂ MTB ನಾಗರಾಜ್ ಅವರು ಕೂಡ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಯಾರೇ ಅಸಮಾಧಾನಿತರಿದ್ದರೂ ಅವರ ಜೊತೆ ಮುಖ್ಯಮಂತ್ರಿಯವರು ಮಾತುಕತೆಯನ್ನು ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ತಿಳಿಸಿದ್ದಾರೆ.