ಧಾರವಾಡ: ಧಾರವಾಡದ ಸಮರ್ಥನಂ ವಿಕಲಚೇತನರ ಸಂಸ್ಥೆಯಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ, ಶ್ರೀ ಸತ್ಯ ಸ್ವರೂಪ ಅಯ್ಯಪ್ಪ ಸೇವಾ ಟ್ರಸ್ಟ್, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ವಿದ್ಯಾಗಿರಿ ಧಾರವಾಡ ಇವರ ಸಹಯೋಗದೊಂದಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಆಚರಣೆ ನೆರವೇರಿಸಿ ವಿಕಲಚೇತನರಿಗೆ ಸಿಹಿಯನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾರ್ಯದರ್ಶಿಗಳಾದ ಬಿ ಸುದರ್ಶನ ಬಾಳಿಗ, ಕಮಿಟಿ ಸದಸ್ಯರಾದ ಮಂಜುನಾಥ ನೀರಲಕಟ್ಟಿ, ಅಶೋಕ್ ಕಾಂಬಳೆ, ಗೋಪಾಲ ದೇವಕಿ, ಶ್ರೀಕಾಂತ್ ಇವರು ಉಪಸ್ಥಿತರಿದ್ದರು.