ಕೂಗು ನಿಮ್ಮದು ಧ್ವನಿ ನಮ್ಮದು

ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಅಕ್ರಮ ಸರಾಯಿ ಜಪ್ತಿ: ಇಬ್ಬರ ಬಂಧನ

ಬೆಳಗಾವಿ: ಬೆಳಗಾವಿಯ ಸೂಪರ್ ಕಾಪ್, ಅಪರಾಧ ವಿಭಾಗದ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಅಕ್ರಮ ಮದ್ಯ ಮಾರಾಟಗಾರರನ್ನು ಹೆಡೆಮುರಿ ಕಟ್ಟಲಾಗಿದೆ. ಚುನಾವಣೆ ಸೇರಿದಂತೆ ಮದ್ಯದಂಗಡಿಗಳು ಬಂದ್ ಇರುವ ಕ್ಲೋಸರ್ ಡೇ ಗಳಲ್ಲಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ನಗರದ ರಕ್ಷಕ ಕಾಲೋನಿಯಲ್ಲಿ ಗೋವಾ ರಾಜ್ಯದಲ್ಲಿ ಮಾರಾಟ ಮಾಡುವ ಮತ್ತು ಮಿಲಿಟರಿ ಕ್ಯಾಂಟೀನ್ ಮುಖಾಂತರ ಸೈನಿಕರಿಗೆ ಮಾರಾಟ ಮಾಡುವ ವಿವಿಧ ಕಂಪನಿಯ ಸರಾಯಿ ಬಾಟಲ ಮತ್ತು ಪೌಚ್ ಗಳನ್ನು ಮದ್ಯ ಪ್ರೀಯರಿಗೆ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಡಲಾಗಿತ್ತು.

ಇನ್ನು ಆರೋಪಿಗಳಾದ ರಾಜೇಶ ಕೇಶವ ನಾಯಿಕ (37) ಸಾ: ಕುಮಾರಸ್ವಾಮಿ ಲೇಔಟ್, ಬೆಳಗಾವಿ, ಶಂಕರ ಬಸವಂತ ದೇಸನೂರ (38) ಕೋನವಾಳ ಗಲ್ಲಿ, ಕಣಬರ್ಗಿ, ಬೆಳಗಾವಿ ಇವರ ರಕ್ಷಕ ಕಾಲೋನಿಯ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ್ದ ವೇಳೆ ಈ ಅಕ್ರಮ ಬಯಲಿಗೆ ಬಂದಿದೆ. ಬಂಧಿತ ಆರೋಪಿತರಿಂದ ಗೋವಾ ರಾಜ್ಯದಲ್ಲಿ ಮಾರಾಟವಾಗುವ ಸರಾಯಿ ತುಂಬಿದ ಒಟ್ಟು 410 ಲೀ, 250 ಮೀ.ಲೀಟರ್‌ದ ವಿವಿಧ ಕಂಪನಿಯ 547 ಬಾಟಲಿಗಳು, ಮತ್ತು ಮಿಲಿಟರಿ ಕ್ಯಾಂಟೀನ್ ಮುಖಾಂತರ ಸೈನಿಕರು ಮತ್ತು ಮಾಜಿ ಸೈನಿಕರಿಗೆ ಮಾತ್ರ ಮಾರಾಟ ಮಾಡಲಾಗುವ ವಿವಿಧ ಕಂಪನಿಯ 152 ಲೀಟರ್ 250 ಮೀ.ಲೀಟರ್‌ದ 203 ಸರಾಯಿ ಬಾಟಲಿಗಳು ಹೀಗೆ ಕರ್ನಾಟಕ ರಾಜ್ಯದ ಮಾರುಕಟ್ಟೆಯಲ್ಲಿ ಅಂದಾಜು ರೂ.12 ಲಕ್ಷದಷ್ಟು ಬೆಲೆಬಾಳುವ ವಿವಿಧ ಕಂಪನಿಯ ಸರಾಯಿ ಬಾಟಲಿಗಳನ್ನು ಹಾಗೂ ಅಕ್ರಮ ಸರಾಯಿ ಸಾಗಾಟಕ್ಕೆ ಬಳಸಿದ ಅಂದಾಜು ಒಂದು ಲಕ್ಷ ಬೆಲೆ ಬಾಳುವ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರು ಈ ಮದ್ಯವನ್ನು ಕ್ಲೋಸರ್ ಡೇ ಸೇರಿದಂತೆ ಮುಂಬರುವ ಲೋಕಸಭಾ ಉಪಚುನಾವಣೆಯ ಕಾಲಕ್ಕೆ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ನಾರಾಯಣ ಬರಮನಿ ನೇತೃತ್ವದ ತಂಡ ಈ ದಾಳಿಯನ್ನು ಕೈಗೊಂಡಿತ್ತು. ಇನ್ನು ಆರೋಪಿಗಳನ್ನು ಸ್ಥಳದಲ್ಲಿ ದಸ್ತಗಿರಿ ಮಾಡಿ ಅವರ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

error: Content is protected !!