ಧಾರವಾಡದ ಐಐಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದ್ದಾರೆ. ಈ ಕ್ಯಾಂಪಸ್ ಗೆ ಮೋದಿಯವರೇ ಫೆಬ್ರವರಿ 2019 ರಲ್ಲಿ ಶಂಕು ಸ್ಥಾಪನೆ ಮಾಡಿದ್ದರು. ₹850 ಕೋಟಿಗೂ ಅಧಿಕ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯಲ್ಲಿ ಪ್ರಸ್ತುತ 4-ವರ್ಷದ ಬಿ.ಟೆಕ್, ಇಂಟರ್ ಡಿಸಿಪ್ಲಿನರಿ 5-ವರ್ಷದ BS-MS ಪ್ರೋಗ್ರಾಂ,ಪಿಎಚ್.ಡಿ ಮತ್ತು ಎಂ ಟೆಕ್ ಕೋರ್ಸ್ ಗಳಿವೆ. ಈಕ್ಯಾಂಪಸ್ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಐಐಟಿ ಕ್ಯಾಂಪಸ್ ಎಂದು ಹೇಳಲಾಗುತ್ತದೆ. ವಿದ್ಯತ್ ಮತ್ತು ನೀರು ಸ್ವಾವಲಂಬಿ, ಸುಸ್ಥಿರತೆಯ ಶೂನ್ಯ ಪಳೆಯುಳಿಕೆ ನಿರ್ಮಾಣದೊಂದಿಗೆ ಮಾನವ ಸೌಕರ್ಯ, ಪರಿಸರ ಮತ್ತು ಐತಿಹಾಸಿಕ ಮೂಲಗಳನ್ನು ಸಂರಕ್ಷಿಸುವುದು ಹೊಸ ಐಐಟಿ ಕ್ಯಾಂಪಸ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ.
ಕ್ಯಾಂಪಸ್ ಮಾಲಿನ್ಯ ಮುಕ್ತವಾಗಿಸಲು ಕ್ಯಾಂಪಸ್‌ನಲ್ಲಿ ಸೈಕಲ್‌ಗಳು ಮತ್ತು ಇ-ವಾಹನಗಳನ್ನು ಮಾತ್ರ ಬಳಸಲಾಗುವುದು. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಪ್ರತಿರೂಪವಾದ ಕಲ್ಲಿನ ರಥದ ಪ್ರತಿಕೃತಿಯು ಆವರಣದ ಪ್ರವೇಶದ್ವಾರದಲ್ಲಿದೆ.