ಕೂಗು ನಿಮ್ಮದು ಧ್ವನಿ ನಮ್ಮದು

ನಾನು ಮುಖ್ಯಮಂತ್ರಿ ಆಗಬೇಕು, ನೀವು ನನ್ನ ಗೆಲ್ಲಿಸ್ತಿರಾ: ನಟ ಉಪೇಂದ್ರ

ಬೆಂಗಳೂರು: ನಾನು ಮುಖ್ಯಮಂತ್ರಿ ಆಗಬೇಕು, ನೀವು ನನ್ನ ಗೆಲ್ಲಿಸ್ತೀರಾ? ಎಂದು ಸ್ಯಾಂಡ್ ವುಡ್ ನಟ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

ನಾನು ಉಪೇಂದ್ರ ಈ ರಾಜ್ಯದ ಮುಖ್ಯಮಂತ್ರಿ (CM ) ಆಗಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ನೀವು ನನ್ನನ್ನ ಗೆಲ್ಲಿಸ್ತೀರಾ? ಎಂಬ ಪ್ರಶ್ನೆಯೊಂದಿಗೆ ಅವರು ಮಾತು ಆರಂಭಿಸಿದ್ದಾರೆ. ಈ ಕುರಿತಾಗಿ ಅಭಿಮಾನಿಗಳು ಸಕಾರಾತ್ಮಕ ಪ್ರತಿಕ್ರೀಯೆಯನ್ನು ಕೊಟ್ಟಿದ್ದಾರೆ. ನೀವು ನನ್ನನ್ನ ಗೆಲ್ಲಸ್ತೀರೋ.. ಸೋಲಸ್ತೀರೋ.. ಆದರೆ ನಾನು ಎಲೆಕ್ಷನ್ ಗೆ ನಿಲ್ಲಲ್ಲ. ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ? ಅಂತ ಕೇಳ್ತೀರಾ? ನಾನು (CM ) ಕಾಮನ್ ಮ್ಯಾನ್ ಆಗಿ ನಿಮ್ಮ ಜೊತೆಗೆ ಇರುತ್ತೇನೆ. ಪ್ರಜಾಕೀಯ ವಿಚಾರಧಾರೆಗಳನ್ನು ತೆಗೆದುಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡುವಂತಾಗಬೇಕು.

ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ. ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ. ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು, ಅವಳು ಕೆಳಗಿಳೀಬೇಕು ಅಂತಾ ಕಾನೂನು ಬರಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ ಪರ್ಮನೆಂಟ್ CM (ಕಾಮನ್ ಮ್ಯಾನ್) ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ? ಎಂದು ಪ್ರಶ್ನಿಸಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸರ್ ನಿಮ್ಮ ಆಲೋಚನೆಗಳು ಸರಿಯಾಗಿಯೇ ಇದೆ. ಆದರೆ ಒಂದು ಪಕ್ಷವನ್ನು ನಡೆಸಲು ಒಬ್ಬ ಸಮರ್ಥ ನಾಯಕ ಬೇಕು. ನೀವು ಆ ಜವಾಬ್ದಾರಿ ತೆಗೆದುಕೊಂಡು ಮುಖ್ಯಮಂತ್ರಿ ಆಗುವುದಾದರೆ ಯುವ ಸಮೂಹ ನಿಮ್ಮನ್ನು ಖಂಡಿತವಾಗಿ ಬೆಂಬಲಿಸುತ್ತೇವೆ. ಇಷ್ಟು ದಿನ ಕೇವಲ ಜಾತಿ, ಧರ್ಮ, ಭ್ರಷ್ಟಾಚಾರ ನೋಡಿ ನೋಡಿ ಸಾಕಾಗಿದೆ. ರಾಜ್ಯ ರಾಜಕಾರಣದ ದಿಕ್ಕು ಬದಲಾಗಬೇಕಿದೆ. ನೀವೇ ಸ್ವತಃ ರಾಜ್ಯದ ಹಳ್ಳಿ ಹಳ್ಳಿಗೂ ಪ್ರವಾಸ ಕೈಗೊಂಡು ವಿಚಾರವನ್ನು ಮುಟ್ಟಿಸಬೇಕು. ಉಪೇಂದ್ರ ಅವರೇ ನಮ್ಮ ಸಿಎಂ ಆಗಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

error: Content is protected !!