ಮೈಸೂರು; ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಸಾನಿಧ್ಯದಲ್ಲಿ ಕಾವೇರಿಗೆ ಆರತಿ ಮಾಡಿದರು, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತೀರದಲ್ಲಿ ಕಾವೇರಿ ಗಾರತಿಯನ್ನು ವಿಶೇಷವಾಗಿ ಮಾಡಿ ನಾಡಿನ ಮತ್ತು ದೇಶದ ಜಗತ್ತಿನ ಕಲ್ಯಾಣಕ್ಕಾಗಿ ಶ್ರೀಗಳು ಪ್ರಾರ್ಥಿಸಿದರು.
ಬಿಬೆ ಗ್ರಾಮ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ತಮ್ಮ ಆಶ್ರಮದಲ್ಲಿ ಜರಗುವ 102 ಬೆಳದಿಂಗಳ ದೀಪಾರತಿಯ ಸಂದರ್ಭದಲ್ಲಿ ಕಾವೇರಿಗೆ ಆರತಿ ಮಾಡಿ ಮಾತನಾಡುತ್ತಾ ನಾವು ಈಗ ದೈವದ ಕೃಪೆಗೆ ಶರಣಾಗುವುದು ಅವಶ್ಯವಿದೆ ಇವತ್ತು ಕಾವೇರಿಗಾರತಿ ಮಾಡುವುದರ ಮುಖಾಂತರ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇವೆ, ಈ ಸಂದರ್ಭದಲ್ಲಿ ಬೆಳಗಾವಿ ಇಂದ ಬಂದು ಹುಕ್ಕೇರಿ ಶ್ರೀಗಳು ಕಾವೇರಿಗಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ಸಂಗತಿ ಎಂದರು,
ಕಾವೇರಿ ಗಾರತಿ ಮಾಡಿ ತಾವೇ ಸ್ವತಹ ಕವನವನ್ನ ರಚಿಸಿ ಹಾಡಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಭಾರತೀಯ ಪರಂಪರೆಯಲ್ಲಿ ನದಿಗಳಿಗೆ ಹೆಚ್ಚು ಮಹತ್ವವಿದೆ ಕಾವೇರಿ ಕರುನಾಡಿನ ಜೀವನದಿ ಅಲ್ಲಿ ಗಂಗಾರತಿ ಎನ್ನ ನಾವು ನೋಡುತ್ತೇವೆ ಉತ್ತರ ಪ್ರದೇಶದ ಭಾಗದಲ್ಲಿ ಕಾಶಿಯಲ್ಲಿ ಆದರಲ್ಲಿ ಕಾವೇರಿಗೆ ಆರತಿಯನ್ನು ಆರಂಭಿಸಿರುವ ಕೀರ್ತಿ ಪರಮ ಪೂಜ್ಯ ಡಾಕ್ಟರ್ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ ಎಂದರು.
ನಟ ನಿರ್ದೇಶಕ ನವೀನ ಕೃಷ್ಣ ಅವರು ಭಾಗವಹಿಸಿ ಶ್ರೀಮಠದ ಕಾರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರಲ್ಲದೆ, 102ರ ಈ ಬೆಳದಿಂಗಳ ಕಾವೇರಿ ಗಾರತಿ ಕಾರ್ಯಕ್ರಮದಲ್ಲಿ ಇಬ್ಬರೂ ಪೂಜ್ಯರು ಜನರ ಕಲ್ಯಾಣಕ್ಕಾಗಿ ವಿಶೇಷವಾದ ಪ್ರಾರ್ಥನೆ ಮಾಡಿದ್ದಾರೆ ಅವರಿಗೆ ನಾವು ಅಭಿನಂದಿಸುತ್ತೇವೆ ಎಂದರು.