ಮಂಡ್ಯ: ವರದಕ್ಷಿಣೆ ಕಿರುಕುಳ ಹಿನ್ನೆಲೆ ಗೃಹಿಣಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಲಿಂಗಾಪುರ ಗ್ರಾಮದ ಪ್ರೇಮಕುಮಾರಿ (26) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮಾರ್ಚ್ 20 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2 ವರ್ಷಗಳ ಹಿಂದೆ ಮೈಸೂರಿನ ರಾಘವೇಂದ್ರ ಜೊತೆ ಮದುವೆ ಆಗಿದ್ದ ಪ್ರೇಮ,
ವರದಕ್ಷಿಣೆಯಾಗಿ 5 ಲಕ್ಷ ನಗದು, 150 ಗ್ರಾಂ ಚಿನ್ನವನ್ನು ಪತಿ ರಾಘವೇಂದ್ರಗೆ ನೀಡಿದ್ದರು.
ಮದುವೆಯಾದ 6 ತಿಂಗಳು ದಂಪತಿಗಳು ಅನ್ಯೋನ್ಯವಾಗಿದ್ದು
ನಂತರದಲ್ಲಿ ವರದಕ್ಷಿಣೆಗಾಗಿ ಪತಿ ರಾಘವೇಂದ್ರ ಮತ್ತೆ ಮತ್ತೆ ಪೀಡಿಸುತ್ತಿದ್ದ ಎಂದು ಪ್ರೇಮಕುಮಾರಿ ಪೋಷಕರು ಆರೋಪಿಸಿದ್ದು, ಈ ಕುರಿತು ಹಲವು ಬಾರಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನ್ಯಾಯ, ಪಂಚಾಯತಿ ಕೂಡ ನಡೆದಿತ್ತು ಎನ್ನಲಾಗಿದೆ.
ಬಳಿಕ ತವರು ಮನೆಯಲ್ಲೇ ಇದ್ದ ಪ್ರೇಮಕುಮಾರಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಇಚ್ಛಿಸಿ LLBಗೆ ಸೇರ್ಪಡೆ ಆಗಿದ್ದರು. ಪತಿ ರಾಘವೇಂದ್ರ ಕುಟುಂಬಸ್ಥರು, ಪ್ರೇಮಾ ಓದುತ್ತಿದ್ದ ಕಾಲೇಜು ಬಳಿಯೂ ಹೋಗಿ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತಿದ್ದ ಪ್ರೇಮ ಕುಮಾರಿ, ಮಾರ್ಚ್ 20 ರ ಸಂಜೆ ತವರು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ರಾಘವೇಂದ್ರ ಕುಟುಂಬಸ್ಥರ ವಿರುದ್ಧ 5 ಪುಟಗಳ ಡೆತ್ನೋಟ್ ಬರೆದಿಟ್ಟು ಪ್ರೇಮಕುಮಾರಿ ಆತ್ಮಹತ್ಯೆ ಮಾಡಿಕೊಡಿದ್ದು, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.