ಕೂಗು ನಿಮ್ಮದು ಧ್ವನಿ ನಮ್ಮದು

ಅಕಾಲಿಕ ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರ ಮೆಂತ್ಯ

ಪ್ರಸ್ತುತ, ಈ ಫಾಸ್ಟ್ ಜೀವನಶೈಲಿಯಲ್ಲಿ ಯಾರಿಗೂ ಕೂಡ ಕೂದಲಿನ ಆರೈಕೆಗಾಗಿ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಬದಲಾದ ಜೀವನಶೈಲಿಯ ನಕಾರಾತ್ಮಕ ಪರಿಣಾಮ, ನಮ್ಮ ಆಹಾರ ಶೈಲಿ ಈ ಎಲ್ಲಾ ಕಾರಣಗಳಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುತ್ತವೆ. ಆದರೆ, ಬಿಳಿ ಕೂದಲಿನ ಸಮಸ್ಯೆ ಕೆಲವರಲ್ಲಿ ಆತ್ಮವಿಶ್ವಾಸವನ್ನೇ ಕುಂದಿಸುತ್ತದೆ. ಇದನ್ನು ತಪ್ಪಿಸುವ ಸಲುವಾಗ ಹೇರ್ ಡೈ ಮೊರೆ ಹೋಗುತ್ತಾರೆ. ಆದಾಗ್ಯೂ, ಹೇರ್ ಡೈನಲ್ಲಿ ಮಿಶ್ರಿತವಾಗಿರುವ ರಾಸಾಯನಿಕಗಳು ಕೆಲವು ಹಾನಿಯನ್ನು ಉಂಟು ಮಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಒಂದು ಪದಾರ್ಥ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

ಹೌದು, ನಿಮ್ಮ ಮನೆಯಲ್ಲಿಯೇ ಇರುವ ಈ ಒಂದು ಪದಾರ್ಥ ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು. ಅದುವೇ ಮೆಂತ್ಯ. ನೀವೂ ಕೂಡ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ದುಬಾರಿ ಉತ್ಪನ್ನಗಳ ಆಗತ್ಯವಿಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಮೆಂತ್ಯಕಾಳು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದೆ.

ಅಕಾಲಿಕ ಬಿಳಿಕೂದಲನ್ನು ಬುಡದಿಂದ ಕಪ್ಪಾಗಿಸಲುಬಲು ಪ್ರಯೋಜನಕಾರಿ ಮೆಂತ್ಯ:-
ಅಕಾಲಿಕ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೆಂತ್ಯವನ್ನು ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮೆಂತ್ಯವನ್ನು ಕೂದಲಿನ ಆರೋಗ್ಯವನ್ನು ಸುಧಾರಿಸಲು ಬಳಸಲಾಗುತ್ತದೆ. ಮೆಂತ್ಯವನ್ನು ಈ ರೀತಿ ಬಳಸುವುದರಿಂದ ಬಿಳಿ ಕೂದಲನ್ನು ಕಪ್ಪಾಗಿಸಬಹುದು.

  • ರಾತ್ರಿ ವೇಳೆ ಒಂದು ಪಾತ್ರೆಯಲ್ಲಿ ಸ್ವಲ್ಪ ಮೆಂತ್ಯಯನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ಅದರಿಂದ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. ಅದು ಒಣಗಿದ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಬಿಳಿ ಕೂದಲು ಶೀಘ್ರದಲ್ಲೇ ಕಪ್ಪಾಗುತ್ತದೆ.
  • ಎರಡು ಚಮಚ ಮೆಂತ್ಯವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ಬಳಿಕ ಅದೇ ನೀರಿನಿಂದ ಕೂದಲನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಅಕಾಲಿಕ ಬಿಳಿ ನಿಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.
  • ಮೆಂತ್ಯ ಹಾಗೂ ಬೆಲ್ಲವನ್ನು ಒಟ್ಟಿಗೆ ಸೇವಿಸುವುದನ್ನು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಶೀಘ್ರದಲ್ಲೇ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ
  • ಮೆಂತ್ಯ ಕಾಳುಗಳನ್ನು ರುಬ್ಬಿ ಪುಡಿ ಮಾಡಿಟ್ಟುಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಈ ಪೇಸ್ಟ್ ಅನ್ನು ಕೂದಲಿನ ಬೇರುಗಳಿಗೆ ಅನ್ವಯಿಸಿ. 15-20 ನಿಮಿಷಗಳ ಬಳಿಕ ಕೂದಲನ್ನು ತೊಳೆಯಿರಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುತ್ತಾ ಬಂದರೆ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ದೊರೆಯಲಿದೆ.
  • ಮೆಂತ್ಯವನ್ನು ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದಲೂ ಕೂಡ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಪಡೆಯಬಹುದು. ಮಾತ್ರವಲ್ಲ, ತಲೆಹೊಟ್ಟು, ಕೂದಲು ಉದುರುವಿಕೆ ಸಮಸ್ಯೆಯಿಂದಲೂ ಪರಿಹಾರ ಸಿಗಲಿದೆ ಎಂದು ಹೇಳಲಾಗುತ್ತದೆ
error: Content is protected !!