ನಿರ್ಜಲೀಕರಣವನ್ನು ತಪ್ಪಿಸಲು ಬಾಯಾರಿಕೆಯಿಲ್ಲದಿದ್ದರೂ ಆಗಾಗ ನೀರು ಕುಡಿಯಿರಿ. ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ನಿಂಬೆ ರಸ, ಮಜ್ಜಿಗೆ/ಲಸ್ಸಿ, ಹಣ್ಣಿನ ರಸಗಳನ್ನು ಸ್ವಲ್ಪ ಉಪ್ಪು ಸೇರಿಸಿ ಸೇವಿಸಿ.
ತೆಳುವಾದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಿ. ಹಾಗೆಯೇ ಹೊರಗೆ ಹೋಗುವಾಗ ಛತ್ರಿ, ಟೋಪಿ, ಟವೆಲ್ ಬಳಸಿ. ಮತ್ತು ಬಿಸಿಲು ನೇರವಾಗಿ ತಾಗದಂತೆ ನೋಡಿಕೊಳ್ಳಿ.
ಬಿಸಿಲಿನ ಅವಧಿಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ. ಅಡುಗೆ ಪ್ರದೇಶವನ್ನು ಸಮರ್ಪಕವಾಗಿ ಗಾಳಿ ಮಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಿ.
ಆಲ್ಕೋಹಾಲ್, ಚಹಾ, ಕಾಫಿ, ಕಾರ್ಬೊನೇಟೆಡ್ ತಂಪು ಪಾನೀಯಗಳು ಮತ್ತು ಹೆಚ್ಚಿನ ಪ್ರಮಾಣದ ಸಕ್ಕರೆಯೊಂದಿಗೆ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ. ಇವುಗಳು ಹೆಚ್ಚು ದೇಹದ ದ್ರವವನ್ನು ಕಳೆದುಕೊಳ್ಳಲು ಕಾರಣವಾಗಬಹುದು.
ನಿಲ್ಲಿಸಿದ ವಾಹನದಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. ಏಕೆಂದರೆ ವಾಹನದೊಳಗಿನ ತಾಪಮಾನವು ಅವರ ಜೀವಕ್ಕೆ ಅಪಾಯಕಾರಿ.
ವಾಕರಿಕೆ ಅಥವಾ ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಕಡು ಹಳದಿ ಮೂತ್ರದ ಜೊತೆಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು, ತ್ವರಿತ ಉಸಿರಾಟ, ತ್ವರಿತ ಹೃದಯ ಬಡಿತದಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.