ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಅಧಿಕ ಆಮ್ಲವು ಆಮ್ಲೀಯತೆ ಅಥವಾ ಆಸಿಡ್ ರಿಫ್ಲಕ್ಸ್ಗೆ ಕಾರಣವಾಗುತ್ತದೆ. ಇದಕ್ಕೆ ನಾವು ಮನೆಯಲ್ಲಿ ಪರಿಹಾರವನ್ನು ಸಹ ಪಡೆಯಬಹುದು. ನಿಮ್ಮ ಮನೆಯಲ್ಲಿರುವ ಸಿಂಪಲ್ ಪದಾರ್ಥಗಳು ಆಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ನೀವು ಆಹಾರವನ್ನು ಕೆಲ ಭಾಗಗಳಾಗಿ ಮಾಡಿಕೊಂಡು ತಿನ್ನುವುದು ಸಹಾಯ ಮಾಡುತ್ತದೆ. ಒಟ್ಟಿಗೆ ಹೆಚ್ಚು ತಿನ್ನುವುದು ಆಮ್ಲೀಯತೆಯನ್ನು ಸಹ ಹೆಚ್ಚು ಮಾಡುತ್ತದೆ. ಹಾಗಾಗಿ ಸ್ವಲ್ಪ ಸ್ವಲ್ಪ ಮಾತ್ರ ತಿನ್ನಿ. ದಿನಕ್ಕೆ 6 ಬಾರಿ ತಿನ್ನಿ.
ಆಲ್ಕೋಹಾಲ್ಯುಕ್ತ ಪಾನೀಯಗಳು ಹೊಟ್ಟೆಯು ಸಾಮಾನ್ಯಕ್ಕಿಂತ ಹೆಚ್ಚು ಆಮ್ಲವನ್ನು ಉತ್ಪಾದಿಸುತ್ತವೆ. ಇದು ಉರಿಯೂತಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಲ್ಕೋಹಾಲ್ ಕುಡಿಯುವ ಅಭ್ಯಾಸವಿದ್ದರೆ ಅದನ್ನು ಬಿಡುವುದು ಉತ್ತಮ.
ಚೀವಿಂಗ್ ಗಮ್ ಲಾಲಾರಸದ ಹರಿವನ್ನು ಉತ್ತೇಜಿಸುತ್ತದೆ, ಇದು ಆಮ್ಲ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಊಟವಾದ ನಂತರ ಒಂದು ಚೀವಿಂಗ್ ಗಮ್ ಸೇವನೆ ಮಾಡುವುದು ಆಸಿಡಿಟಿ ಕಡಿಮೆ ಮಾಡುತ್ತದೆ.
ನೀವು ರಾತ್ರಿ ಮಲಗುವ ನಿಮ್ಮ ಬಲಭಾಗಕ್ಕೆ ತಿರುಗಿ ಮಲಗಬಾರದು. ಎಡಭಾಗಕ್ಕೆ ತಿರುಗಿ ಮಲಗಿಕೊಳ್ಳಿ. ಈ ರೀತಿ ಮಲಗುವುದು ಆಸಿಡ್ ರಿಫ್ಲಕ್ಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣು ಅಸಿಡಿಟಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಇದು ಹೆಚ್ಚುವರಿ ಆಮ್ಲ ರಚನೆಯನ್ನು ತಡೆಯುವ ಮೂಲಕ ಕರುಳು ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.
ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ, ಕ್ಯಾಲ್ಸಿಯಂ ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು.
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಅದು ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮಜ್ಜಿಗೆ ನಿಮಗೆ ಎದೆಯುರಿಯಿಂದ ಪರಿಹಾರ ನೀಡುತ್ತದೆ.
ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡಲು ಈ ಬಾದಾಮಿ ಸಹಾಯ ಮಾಡುತ್ತದೆ. ನೀವು ಬಾದಾಮಿ ಹಾಲನ್ನು ಸೇವಿಸುವುದು ದೇಹದ ಆರೋಗ್ಯ ಕಾಪಾಡಲು ಸಹ ಸಹಕಾರಿ