ಕೂಗು ನಿಮ್ಮದು ಧ್ವನಿ ನಮ್ಮದು

ಹುಡುಗಿಯ ಹೊಟ್ಟೆಯಲ್ಲಿ ಒಂದೂವರೆ ಕೆ.ಜಿ ಕೂದಲು, ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

ಮಡಿಕೇರಿ: ನಾಪೋಕ್ಲು ಗ್ರಾಮದ ಹುಡಗಿಯ ಹೊಟ್ಟೆಯಲ್ಲಿದ್ದ ಒಂದೂವರೆ ಕೆ.ಜಿ ತೂಕದ ಕೂದಲಿನ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಕೆಲವಾರು ವರ್ಷಗಳಿಂದ ಇಪ್ಪತ್ತು ವರ್ಷದ ಹುಡುಗಿ ಯಾರಿಗೂ ತಿಳಿಯದಂತೆ ಕೂದಲನ್ನು ತಿಂದುಕೊಂಡು ಇದ್ಲು. ಈ ಪರಿಣಾಮ ಬರೋಬ್ಬರಿ ಒಂದೂವರೆ ಕೆ.ಜಿಯಷ್ಟು ಕೂದಲು ಆ ಯುವತಿಯ ಹೊಟ್ಟೆಯಲ್ಲಿ ಶೇಖರಣೆಯಾಗಿ ಗೆಡ್ಡೆಯಾಗಿದೆ. ಈ ಹಿನ್ನೆಲೆ ಕೂದಲಿನ ಗೆಡ್ಡೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆದಿದ್ದಾರೆ.

ನಾಪೋಕ್ಲು ಗ್ರಾಮದಿಂದ ಹೊಟ್ಟೆ ನೋವು ಎಂದು ಹೇಳುತ್ತಿದ್ದ ಹುಡಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಈ ಹುಡಗಿಯನ್ನು ಪರೀಕ್ಷೆ ಒಳಪಡಿಸಿದಾಗ ಅವಳ ಹೊಟ್ಟೆಯಲ್ಲಿ ಕೂದಲಿನ ಆಕಾರದ ಕಪ್ಪಾದ ಗಡ್ಡೆ ವೈದ್ಯರಿಗೆ ಕಾಣಿಸಿದೆ. ಆ ಹುಡಗಿ ಯಾವಗಲೂ ಹೊಟ್ಟೆ ನೋವಿನಿಂದಾಗಿ ಏನು ತಿಂದ್ರು ವಾಂತಿ ಮಾಡಿಕೊಳ್ಳುತ್ತಿದ್ದಳು. ಆಕೆಯಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗಿದ್ದ ಹಿನ್ನೆಲೆ ರಕ್ತ ಕೊಡಿಸಿ ಉಪಚರಿಸಿದ ನಂತರ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ.

ಈ ಕುರಿತು ಮಾತನಾಡಿದ ವೈದ್ಯರು, ಗೆಡ್ಡೆ ಒಂದೂವರೆ ಕೆ.ಜಿ ತೂಕವಿದ್ದು, ಇದೀಗ ಈ ಹುಡಗಿ ಆರೋಗ್ಯದಿಂದಿದ್ದಾಳೆ. ಇದೊಂದು ಅಪರೂಪದ ಪ್ರಕರಣವಾಗಿದೆ. ‘ಟ್ರೆಂಕೊಬಸಾರ್’ ಎಂದು ಕರೆಯಲ್ಪಡುವ ಈ ಪ್ರಕರಣ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಕೂದಲು ತಿನ್ನುವುದರಿಂದ ಅದು ಜೀರ್ಣವಾಗದೆ ಗೆಡ್ಡೆಯ ರೂಪ ತಾಳುತ್ತದೆ. ಇದು ಜೀವಕ್ಕೆ ಅಪಾಯಕಾರಿ. ೩ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಈ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ರು.

ಶಸ್ತ್ರಚಿಕಿತ್ಸೆಯನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಡಿಕಲ್ ಸೈನ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಅಜಿತ್‍ಕುಮಾರ್, ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್‍ಕುಮಾರ್, ಡಾ.ತಾರಾನಂದನ್, ಡಾ.ಪ್ರದೀಪ್ ಶಸ್ತ್ರಚಿಕಿತ್ಸೆ ನಡೆಸಿ ಕುದಲಿನ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ಹುಡಗಿ ಇದೀಗಾ ಅರೋಗ್ಯದಿಂದ ಇದ್ದು, ನಾಪೋಕ್ಲು ಮನೆಗೆ ಕಳುಹಿಸಲಾಗಿದೆ. ಈ ಗಡ್ಡೆ ಆಕಾರದ ಕೂದಲನ್ನು ನೋಡಿದ ಅಸ್ಪತ್ರೆಯ ಸಿಬ್ಬಂದಿಗಳು ಆಶ್ಚರ್ಯ ಪಟ್ರು.

error: Content is protected !!