ಹಾವೇರಿ: ಈ ಸುದ್ದಿ ಓದಿದ್ರೆ ನಿಮ್ಮ ಮೈ ಜುಮ್ ಅನ್ನೋದು ಗ್ಯಾರಂಟಿ. ಯಾಕೆಂದರೆ ಬಾಲಕನೊಬ್ಬ ಶಾಲಾ ಕಂಪೌಂಡ್ ಜೀಗಿಯುವಾಗ ಬಾರಿ ಅವಘಡ ಸಂಭವಿಸಿದೆ. ಗೆಳೆಯರ ಜೊತೆಗೆ ಕ್ರಿಕೆಟ್ ಆಟ ಆಡುತ್ತಿರುವಾಗ ಬಾಲ್ ಕಾಂಪೌಂಡ್ ಆಚೆ ಬಿದ್ದಿದೆ. ಕಾಂಪೌಂಡ್ ಆಚೆ ಬಿದ್ದ ಬಾಲನ್ನು ತರಲು ಹೋದ ಬಾಲಕ ಕಾಂಪೌಂಡ್ ಜಿಗಿಯುವಾಗ ಆಯ ತಪ್ಪಿ ಬಿದ್ದಿದ್ದಾನೆ. ಹೀಗೆ ಆಯ ತಪ್ಪಿ ಬಿದ್ದ ಬಾಲಕನ ಕಾಲಲ್ಲಿ ಮರದ ಕೊಂಬೆ ಹೊಕ್ಕಿದೆ. ಶಾಲೆ ಇಲ್ಲದ ಕಾರಣ ಮಕ್ಕಳು ಮೇಲಿಂದ ಮೇಲೆ ಅನಾಹುತಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 9 ವರ್ಷದ ತರುಣ್ ಬಳ್ಳಾರಿ ಎಂಬ ಬಾಲಕನ ಕಾಲಿನ ತೊಡೆಯ ಭಾಗಕ್ಕೆ ಕೋಲು ಹಿಕ ಹೊಕ್ಕಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಬಾಲಕ ತರುಣ್ ಜಂಪ್ ಮಾಡುವಾಗ ಆಯಾ ತಪ್ಪಿ ಬಿದ್ದ ಪರಿಣಾಮ ಬಾಲಕನ ಬಲಗಾಲಿನ ತೊಡೆಗೆ 30 ಇಂಚಿನ ಮರದ ಕೊಂಬೆ ಹೊಕ್ಕು ನರಳುತ್ತಾ ಬಿದ್ದಿದ್ದ ಬಾಲಕನನ್ನು ಗೆಳೆಯರು ಹಾಗೂ ಸ್ಥಳಿಯರು ರಕ್ಷಣೆ ಮಾಡಿದ್ದು, ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.