ನೀವು ಹಿಂದಿನ ಮೂವಿಗಳಲ್ಲಿ ವಿವಿಧ ರೀತಿ ಹೇರ್ ಸ್ಟೈಲ್ಗಳನ್ನು ನೋಡಿರುತ್ತೀರಿ. ಕೆಲವು ಹೇರ್ ಸ್ಟೈಲ್ಗಳು ಮತ್ತೇ ಟ್ರೆಂಡ್ ಆಗುತ್ತಿರುವುದನ್ನು ಕಾಣಬಹುದು. ಅಂತಹ ಕೆಲವು ಹೇರ್ ಸ್ಟೈಲ್ಗಳು ಇಲ್ಲಿವೆ.
ಪಿನಪ್ ಬ್ಯಾಂಗ್ಸ್ (1950): ಹುಬ್ಬುಗಳನ್ನು ಸ್ಪರ್ಶಿಸುವಂತಹ ಈ ಕೇಶವಿನ್ಯಾಸದಲ್ಲಿ , ಕೂದಲಿನ ತುದಿ ಭಾಗ ಸುರುಳಿಯಾಕಾರದಲ್ಲಿ ಕಾಣಬಹುದಾಗಿದೆ.
ಇಟಾಲಿಯನ್ ಕಟ್ (1950): ಹಿಂದಿನ ಕಾಲದ ಡಿಸ್ಕೋ ಸಾಂಗ್ಗಳಲ್ಲಿ ನೀವು ಈ ರೀತಿಯ ಇಟಾಲಿಯನ್ ಕಟ್ ಹೇರ್ ಸ್ಟೈಲ್ ನೋಡಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಇದು ಪುರುಷರಲ್ಲಿ ಟ್ರೆಂಡ್ ಆಗುತ್ತಿದೆ.
ಸ್ಕಲ್ಪ್ಟೆಡ್ ವೇವ್ಸ್ (1930): ಕೂದಲಿನ ತುದಿಯು ಸುರಳಿಕಾರದ ವಿನ್ಯಾಸವನ್ನು ಹೊಂದಿದ್ದು, 30ರ ದಶಕದ ಸಾಕಷ್ಟು ಸಿನಿಮಾಗಳಲ್ಲಿ ಈ ಹೇರ್ ಸ್ಟೈಲ್ ಕಾಣಬಹುದಾಗಿದೆ.
ಫಿಂಗರ್ ವೇವ್ಸ್ (1920): 20 ರ ದಶಕದ ಅಂತ್ಯದ ವೇಳೆಗೆ, ವಿಕ್ಟೋರಿಯನ್ ಯುಗದ ಹೆಚ್ಚು ಪ್ರಚಲಿತದಲ್ಲಿಂತಹ ಕೇಶ ವಿನ್ಯಾಸವಿದು.
ಬ್ರೌಬ್ಯಾಂಡ್ (1920): ಆರಂಭಿಕ ಥಿಯೇಟ್ರಿಕಲ್ ಮೋಷನ್ ಪಿಕ್ಚರ್ಗಳಲ್ಲಿ ಈ ರೀತಿಯ ಕೂದಲನ್ನು ಮಣಿಗಳಿಂದ ಅಲಂಕರಿಸಿದ ಕೇಶವಿನ್ಯಾಸವನ್ನು ಕಾಣಬಹುದು.
ದಿ ಬಾಬ್ (1920): ಈ ಹೇರ್ ಸ್ಟೈಲ್ 100 ವರ್ಷಗಳಿಂದ ಅದೇ ಜನಪ್ರಿಯತೆಯನ್ನು ಪಡೆದಿದೆ. ಮಕ್ಕಳಿಗಂತೂ ಬಾಬ್ ಕಟ್ ಎಂದರೆ ಅಚ್ಚುಮೆಚ್ಚು.
ರೀಗಲ್ ಶಾರ್ಟ್ ಕಟ್ (1990 ರ ದಶಕ): 90ರ ದಶಕದಲ್ಲಿ ರಾಜ ಮನೆತನಗಳಲ್ಲಿ ಈ ಕೇಶ ವಿನ್ಯಾಸವನ್ನು ಕಾಣಬಹುದು. ರಾಜಕುಮಾರಿ ಡಯಾನಾರನ್ನು ಈ ಹೇರ್ ಸ್ಟೈಲ್ನಲ್ಲಿ ಕಾಣಬಹುದು.