ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯೇಂದ್ರ ಮಾಡಿರುವ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್.ವಿಶ್ವನಾಥ್

ಮೈಸೂರು: ಇದು ಟಾರ್ಗೆಟ್ ಬಿ.ಎಸ್ ಯಡಿಯೂರಪ್ಪ ಅಲ್ಲ. ಇದು ಟಾರ್ಗೆಟ್ ಕರಪ್ಷನ್. ನಾನು ಹಿಂದೆ ಮಾಡಿದ ಆರೋಪಗಳು ಈ ದಾಳಿ ಮೂಲಕ ಸತ್ಯವಾಗಿದೆ. ವಿಜಯೇಂದ್ರ ಮಾಡಿರುವ ಮಹಾ ಭ್ರಷ್ಟಾಚಾರಕ್ಕೆ ಈ ದಾಳಿ ಇನ್ನೊಂದು ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ರು. ಮೈಸೂರಿನಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಎಚ್.ವಿಶ್ವನಾಥ್, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಿದ್ದು ವಯಸ್ಸಿನ ಕಾರಣಕ್ಕೆ ಅಲ್ಲ. ಮಗ ಮಾಡಿದ ಭ್ರಷ್ಟಾಚಾರದ ಕಾರಣಕ್ಕೆ ಅವರು ಅಧಿಕಾರದಿಂದ ಕೆಳಗೆ ಇಳಿದ್ರು.

ಈ ದಾಳಿ ಪರೋಕ್ಷವಾಗಿ ವಿಜಯೇಂದ್ರ ಮೇಲೆ ಆದ ದಾಳಿ. ತಂದೆಯ ಪೆನ್, ನಾಲಿಗೆ ಎಲ್ಲವನ್ನೂ ಕಿತ್ತುಕೊಂಡು ತಂದೆಯ ಮರ್ಯಾದೆಯನ್ನು ಕಳೆದು ಪಕ್ಷದ ಮರ್ಯಾದೆಯನ್ನೂ ಕಳೆದ್ರು ಎಂದು ವಿಶ್ವನಾಥ್ ಹರಿಹಾಯ್ದಿದ್ರು. ಇವತ್ತು ಮುಂಜಾನೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತರಾಗಿ ಗುರುತಿಸಿಕೊಂಡಿದ್ದ ಉಮೇಶ್ ಸಹಿತ ೩೦ಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್ಗಳ ಮನೆ ಮೇಲೆ ಆದಾಯ ತೆರಿಗೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ.

BMTC ಕಂಡೆಕ್ಟರ್ ಆಗಿದ್ದ ಉಮೇಶ್ ನಂತರ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದ್ರು. ನಂತರ ವಿಜಯೇಂದ್ರ ಮತ್ತು ಬಿಎಸ್ವೈ ಇಬ್ಬರ ವ್ಯವಹಾರಗಳನ್ನು ಉಮೇಶ್ ನೋಡಿಕೊಳ್ಳುತ್ತಿದ್ರು.
ಮೂಲತಃ ಶಿವಮೊಗ್ಗ ಜಿಲ್ಲೆ ಆಯನೂರಿನವರಾಗಿರುವ ಉಮೇಶ್, ಬಿಎಸ್ವೈ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ರು.

೨೦೦೮ರಲ್ಲಿ ಬಿಎಸ್‍ವೈ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಆಪ್ತ ಶಾಖೆಯಲ್ಲಿ ಕೆಲಸ ಮಾಡಿದ್ದ ನಂತರ ಅಧಿಕಾರ ಕಳೆದುಕೊಂಡ್ರು ಬಿಎಸ್‍ವೈ ನಂಟು ಬಿಟ್ಟೇ ಇರಲಿಲ್ಲ. ಬಿಎಸ್‍ವೈ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು. ಬಿಎಸ್‍ವೈ ಎಲ್ಲಾ ಆಪ್ತ ಖಾಸಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದ ಉಮೇಶ್ ಇದೀಗ ಬಿಎಸ್‍ವೈ ರಾಜೀನಾಮೆ ನಂತರ ಹಾಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಸಹಾಯಕನಾಗಿ ಸೇರ್ಪಡೆಗೊಂಡಿದ್ರು. ಮುಖ್ಯಮಂತ್ರಿ ಆಪ್ತ ಸಹಾಯಕನಾದ್ರೂ ಬಿಎಸ್‍ವೈ ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದು, ಯಡಿಯೂರಪ್ಪ ವಿಧಾನಸಭೆ ವಿಪಕ್ಷ ನಾಯಕರಾದಾಗಿಂದಲೂ ಜೊತೆಗೆ ಇರುವ ಉಮೇಶ್ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ವಿಜಯನಗರದಲ್ಲಿ ೧ ಭವ್ಯ ಮನೆಯ ನಿರ್ಮಾಣ ಮಾಡುತ್ತಿರುವ ಉಮೇಶ್ ಅವರ ಮೇಲೆ ಐಟಿ ರೇಡ್ ಆಗಿದೆ.

error: Content is protected !!