ಬೆಳಗಾವಿ: ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಹಃ. ಹೌದು.. ಪ್ರತಿಯೊಬ್ಬರ ಜೀವನದಲ್ಲಿ ಬಲಿಷ್ಠವಾದುದು ಗುರುಬಲ. ಹಣಬಲ, ಜನಬಲ, ಕುಲಬಲಗಳಿಗಿಂತ ಗುರುಬಲ ಬಲಿಷ್ಠ. ಅಂದಹಾಗೆ ಇಂದು ಬೆಳಗಾವಿ ಜಿಲ್ಲೆ ಕರದಂಟಿನ ನಾಡು ಗೋಕಾಕದ “ನ್ಯೂ ಇಂಗ್ಲೀಷ್ ಸ್ಕೂಲ್” ನಲ್ಲಿ ಗುರುವಂದನಾ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ 1996-97 ನೇ ಸಾಲಿನಲ್ಲಿ ಪಾಠ ಬೋಧನೆ ಮಾಡಿದ ಶಿಕ್ಷಕರು ಸೇರಿದಂತೆ ಪ್ರಸ್ತುತ ಕರ್ತವ್ಯದಲ್ಲಿದ್ದ ಶಿಕ್ಷಕರು ಭಾಗವಹಿಸಿದ್ದರು. 1996-97 ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ ಪೂರೈಸಿದ ವಿದ್ಯಾರ್ಥಿಗಳು ಆಯೋಜಿಸಿದ್ದ “ಗುರುವಂದನಾ” ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ನೆರೆದಿದ್ದ 1996-97 ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅನುಗ್ರಹ ಸಂದೇಶ ನೀಡಿದರು. ಇನ್ನು ಬೆಳಿಗ್ಗೆ 8 ಗಂಟೆಗೆ “ನ್ಯೂ ಇಂಗ್ಲೀಷ್ ಸ್ಕೂಲ್” ಆವರಣ ಪ್ರವೇಶಿಸಿದ ಮಾಜಿ ವಿದ್ಯಾರ್ಥಿಗಳೆಲ್ಲರೂ ಇಳಿಹೊತ್ತಿನ ವರೆಗೂ ಇದ್ದು ಎಂಜಾಯ್ ಮಾಡಿದ್ರು.
ಬೆಳಗಿನ ಉಪಹಾರ, ಮದ್ಯಾಹ್ನದ ಊಟದ ಜೊತೆಗೆ ಮನರಂಜನೆಯ ರಸದೂಟ ಒಂದೆಡೆಯಾದರೆ, ಸಂಜೆಯ ಅಲ್ಪೋಪಹಾರಕ್ಕಿದ್ದ ಮೈಸೂರು ಅವಲಕ್ಕಿ ಜೊತೆಗಿನ ಸಿಹಿ ತಿನಿಸು ಮರೆಯಲಾರದ ನೆನಪಿನ ಬುತ್ತಿ ಹೊರಸಿತ್ತು. ಸುಮಾರು ನೂರಕ್ಕೂ ಹೆಚ್ಚು ಮಾಜಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿಯಾದ್ರು. ಬರೋಬ್ಬರಿ 23 ವರ್ಷಗಳ ನಂತರ ಒಂದೆಡೆಗೆ ಸೇರಿದ ಈ ಸ್ನೇಹಿತರ ಸಮ್ಮಿಲನ ಹಲವು ಮರೆಯಲಾರದ ಘಟನೆಗಳಿಗೆ ಸಾಕ್ಷಿಯೂ ಆಯ್ತು.
ಅಲ್ಲದೇ ಸಮಾರಂಭದುದ್ದಕ್ಕೂ ಹಲವು ಮನರಂಜನಾ ಚಟುವಟಿಕೆಗಳನ್ನು ನಡೆಸಲಾಯಿತು. ಇನ್ನು ಊಟವಂತೂ ತಿಂದಷ್ಟು ಮತ್ತೆ ಮತ್ತೆ ತಿಂತಿರಬೇಕು ಅನ್ನುವಷ್ಟು ರುಚಿಯಾಗಿತ್ತು. ಹೀಗಾಗಿ, ಮದ್ಯಾಹ್ನದ ಊಟದ ನಂತರವಂತೂ ಊಟದ ಉಸ್ತುವಾರಿ ವಹಿಸಿದ್ದ ಗೆಳೆಯರನ್ನ ಹೋಗಳಿದ್ದೆ.. ಹೊಗಳಿದ್ದು. ಇನ್ನು ಒಂದೆಡೆ ಸೇರಿದ ಸ್ನೇಹಿತರೆಲ್ಲರೂ ಸಖತ್ ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ರೆ, ಹಾಡಿನ ಬಂಡಿಯಲ್ಲೂ ತಾವೇನು ಕಡಿಮೆ ಇಲ್ಲ ಅನ್ನೊದನ್ನ ಸಾರಿದ ಕುಚುಕುಗಳು ಇಡೀ ದಿನ ಸಮಯ ಕಳೆದದ್ದೇ ಗೊತ್ತಾಗ್ಲಿಲ್ಲಾ ಅಂತ ಗೊಣಗುತ್ತ ಸಮಾರಂಭದ ನಂತರ ಒಲ್ಲದ ಮನಸ್ಸಿನಿಂದ ಕಾಲ್ಕಿತ್ತಿದ್ದಂತು ಸುಳ್ಳಲ್ಲ.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಲಗಮಪ್ಪಗೋಳ್, ಬಿ.ಆರ್.ಚಿಪ್ಪಲಕಟ್ಟಿ, ಶಿಕ್ಷಕರಾದ ಎಸ್.ಕೆ.ಹಂದಿಗುಂದ, ತುಪ್ಪಾರೊಟ್ಟಿ, ಇಮಡೇರ್, ನಿವೃತ್ತ ಶಿಕ್ಷಕರಾದ ಎಸ್.ಎಸ್.ಅಂಗಡಿ, ಬಿ.ಬಿ.ಪಟಗುಂದಿ, 1996-97 ನೇ ಸಾಲಿನ ವಿದ್ಯಾರ್ಥಿಗಳಾದ ವೀಣಾ ಜರತಾರಕರ್, ಪ್ರೀಯಾ ಚಿಕ್ಕೋಡಿ, ಜ್ಯೋತಿ ಪಟ್ಟಣಶೆಟ್ಟಿ, ದೀಪಾ ಅಂತ್ರೆ, ಪ್ರೇಮಾ ಗಡದಾನ್, ಶ್ರದ್ಧಾ ಸುಪಲಿ, ಹಿರಿಯ ಪತ್ರಕರ್ತ ಚಂದ್ರು ಶ್ರೀರಾಮುಡು, ರವಿ ಗಾಡವಿ, ಸುರೇಶ್ ತುಪ್ಪಾರೋಟ್ಟಿ, ಅಮೀತ್ ಬೊಂಗಾಳೆ, ಮಹೇಶ್ ಕೋಟುರ್, ಕಾಡಣ್ಣ ಜೈನ್, ಬಸವರಾಜ್ ಮೊತ್ಯಾಗೋಳ್, ಅಜೀತ್ ಖನಗಾವಿ, ವಿನಾಯಕ್ ವಾಗುಲೆ ಸೇರಿದಂತೆ 1996-97 ನೇ ಸಾಲಿಯ ಬಹುತೇಕರು ಉಪಸ್ಥಿತರುದ್ದು ಸಮಾರಂಭದ ಯಶಸ್ಸಿಗೆ ಕಾರಣರಾದ್ರು.