ದಾವಣಗೆರೆ: ಮೇಕೆದಾಟು ಯೋಜನೆಯಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ನಮ್ಮ ಪಾಲಿನ ನೆಲ, ಜಲ ಕಬಳಿಸಲು ಪ್ರಯತ್ನ ಮಾಡಿದರೆ ಸರ್ಕಾರ ಬಗ್ಗಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ರು. ಸುದ್ದಿಗಾರರ ಜೊತೆಗೆ ಮಾತನಾಡಿರುವ ಗೋವಿಂದ ಕಾರಜೋಳ ಕುಡಿಯುವ ಮತ್ತು ಜಲ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡ್ಡಿ ಇಲ್ಲ.
ನಮ್ಮ ರಾಜ್ಯದ ನೀರು ಬಳಕೆ ಮಾಡಲು ಬೇರೆ ರಾಜ್ಯದವರ ಅಪ್ಪಣೆಯು ನಮಗೆ ಬೇಕಾಗಿಲ್ಲ. ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆ ನಿರಪೇಕ್ಷಣೆಗಾಗಿ ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ತಮಿಳುನಾಡಿನವರು ಖ್ಯಾತೆ ತೆಗೆಯೋದು ಅಷ್ಟು ಸರಿಯಲ್ಲ. ನಮ್ಮ ಪಾಲಿನ ನೀರನ್ನು ಕಬಳಿಸುವುದು ಎಷ್ಟರ ಮಟ್ಟಿಗೆ ಸರಿ ಕಾನೂನಾತ್ಮಕವಾಗಿ ತಾಂತ್ರಿಕ ಪರಿಣಿತರಿಂದ ಈ ಪ್ರಕರಣ ಎದುರಿಸುತ್ತೇವೆ.
ರಾಜಕಾರಣ ಮಾಡದೇ ಎಲ್ಲಾ ಪಕ್ಷದವ್ರು ಒಟ್ಟಾಗಿ ಎದುರಿಸುತ್ತೇವೆ ಎಂದ್ರು. ಈ ವೇಳೇ ಭದ್ರಾ ಮೇಲ್ದಂಡೆ ಕಾಮಗಾರಿ ಚಾಲನೆಯಲ್ಲಿದೆ. ಅದನ್ನು ರಾಷ್ಟ್ರೀಯ ಕಾಮಗಾರಿ ಎಂದು ಘೋಷಣೆ ಮಾಡಲು ತಯಾರಿ ಮಾಡಿಕೊಂಡಿದೆ. ಇನ್ನೊಂದು ಹೈಪವರ್ ಕಮಿಟಿಯ ಮೀಟಿಂಗ್ ಆಗಬೇಕು. ತದನಂತರ ಕೇಂದ್ರ ಸಂಪುಟ ಒಳಪಡುತ್ತದೆ. ಆಗ ಅದು ನಮ್ಮ ಕೈಸೇರುತ್ತದೆ. ಶಾಲೆಗಳ ಪ್ರಾರಂಭದ ಬಗ್ಗೆ ನಮ್ಮ ತಜ್ಞರ ತಂಡವು ಇದೆ, ಜೊತೆಗೆ ವೈದ್ಯರ ತಂಡವು ಇದೆ ಅದರ ಬಗ್ಗೆ ಅವರು ನೋಡ್ಕೋತ್ತಾರೆ. ಎಂದು ಗೋವಿಂದ್ ಕಾರಜೋಳ ಹೇಳಿದ್ದಾರೆ.