ಕೂಗು ನಿಮ್ಮದು ಧ್ವನಿ ನಮ್ಮದು

ದೇವರ ವಿಗ್ರಹಗಳ ಪಾಲಿಶ್ ಮಾಡಿ ಕೊಡ್ತೇನಿ ಎನ್ನುವ ನೆಪದಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳ ಲೂಟಿ

ಚಿಕ್ಕಬಳ್ಳಾಪುರ: ಮನೆಯಲ್ಲಿನ ದೇವರ ವಿಗ್ರಹಗಳ ಪಾಲಿಷ್ ಮಾಡಿಕೊಡ್ತೀವಿ, ಅವನ್ನು ಲಕಾ ಲಕಾ ಅಂತ ಹೊಳಿಸ್ತೀವಿ ಎಂದು ಮನೆಯಲ್ಲಿದ್ದ ಒಂಟಿ ವೃದ್ಧೆಗೆ ಮಂಕು ಬೂದಿ ಎರಚಿ ಸರಿ ಸುಮಾರು ಎಂಟಿ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಇಬ್ರು ಖತರ್ನಾಕ್ ಖದೀಮರು ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲಗುರ್ಕಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಸೆಪ್ಟೆಂಬರ್ ೨೪ ರಂದು ಗುಂಡ್ಲಗುರ್ಕಿ ಗ್ರಾಮದ ಸೊಣ್ಣೇಗೌಡ ಎಂಬವರ ಮನೆ ಹತ್ತಿರ ಸರ್ಕಾರಿ ಅಧಿಕಾರಿಗಳಂತೆ ಪೋಸ್ ಕೊಡ್ತಾ, ಸಭ್ಯಸ್ಥರಂತೆ ನೀಟಾಗಿ ಇನ್ ಶರ್ಟ್ ಮಾಡ್ಕೊಂಡು, ಕಾಲಿಗೆ ಶೂ ಹಾಕಿಕೊಂಡು ಇಬ್ರು ಖತರ್ನಾಕ್ ಖದೀಮರು ಬಂದಿದ್ರು.

ಮನೆಯಲ್ಲಿದ್ದ ಹಳೆ ದೇವರ ವಿಗ್ರಹಗಳು ಮತ್ತು ಹಳೆ ಚಿನ್ನಾಭರಣಗಳಿಗೆ ಪಾಲಿಷ್ ಮಾಡಿ ಲಕಾ ಲಕಾ ಹೊಳೆಯುವ ಹಾಗೆ ಮಾಡಿ ಕೊಡ್ತೇವಿ ಎಂದು ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಮನೆ ಹತ್ತಿರ ಬಂದು ಒಂಟಿಯಾಗಿ ಮನೆಯಲ್ಲಿದ್ದ ವೃದ್ಧೆ ಚಿನ್ನಮ್ಮ ಬಳಿ ಹೋಗಿದ್ದಾರೆ. ಮಹಿಳೆ ನಮಗೆ ಯಾವ ಪಾಲಿಷ್ ಬೇಡ ಎನ್ನುತ್ತಿದ್ರು ಕೇಳದೆ, ಹೋಗಲಿ ನಾವು ಇಲ್ಲಿಗೆ ಬಂದಿದ್ದೇವೆ ಎನ್ನುವ ಗುರುತಿಗೆ ಬುಕ್ ಗೆ ಸಹಿ ಹಾಕಿ ಎಂದು ಕೇಳಿದ್ರು. ಅವರು ಚಿನ್ನಮ್ಮನಿಗೆ ಕೈಯಲ್ಲಿ ಅದೇನೊ ಪೇಪರ್ ಕೊಟ್ಟಿದ್ದಾರೆ ಅಷ್ಟೆ, ಅದನ್ನು ತೆಗೆದುಕೊಂಡು ಚಿನ್ನಮ್ಮಗೆ ಮಂಕುಬೂದಿ ಹಾಕಿ, ಮೊದಲು ದೇವರ ವಿಗ್ರಹವೊಂದಕ್ಕೆ ಪಾಲಿಶ್ ಹಾಕಿ ಕೊಟ್ಟಿದ್ದಾರೆ.

ಬಳಿಕ ಕುಡಿಯಲು ನೀರು ಕೊಡಲು ಹೇಳಿ ತದನಂತರ ಮನೆ ಒಳಗೆ ಬಂದು ಮನೆಯ ಬೀರುವಿನಲ್ಲಿದ್ದ ೮ ಲಕ್ಷ ರೂಪಾಯಿ ಬೆಲೆ ಬಾಳುವ ೧೫೦ ಗ್ರಾಂ ತೂಕದ ೪ ಬಂಗಾರದ ಬಳೆಗಳು, ೧ ಮಾಂಗಲ್ಯ ಸರ, ೨ ಎಳೆಯ ಬಂಗಾರದ ಸರವನ್ನು ಕದ್ದು, ಇಬ್ರು ಕ್ಷಣಾರ್ಧಲ್ಲಿ ಪರಾರಿ ಆಗಿದ್ದಾರೆ. ಹೇಳಿ ಕೇಳಿ ಚಿನ್ನಮ್ಮ ಶ್ರೀಮಂತ ಮಹಿಳೆ, ಮಕ್ಕಳು ದೊಡ್ಡ ದೊಡ್ಡ ಗುತ್ತಿಗೆದಾರರು, ಅಧಿಕಾರಿಗಳು ಆಗಿದ್ದಾರೆ. ಹಾಗಾಗಿ ಇವರ ಮನೆಯನ್ನೆ ಟಾರ್ಗೆಟ್ ಮಾಡಿಕೊಂಡ ಕಿರಾತಕರು ಈ ಕೃತ್ಯ ಎಸಗಿದ್ದಾರೆ.

ಚಿನ್ನಮ್ಮ ಈ ಕುರಿತು ದೂರು ಪಡೆದಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಅಪರಿಚಿತ ಕಿಲಾಡಿಗಳ ವಿರುದ್ದ IPS ಸೆಕ್ಷನ್ ೩೭೯ ಕಳ್ಳತನಕ್ಕೆ ಶಿಕ್ಷೆ, ೪೨೦ ಮೋಸ ಮಾಡುವುದು ಹಾಗೂ ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು ಗಳಡಿ ಪ್ರಕರಣ ದಾಖಲು ಮಾಡಿಕೊಂಡು ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಆಸಾಮಿಗಳ ಎಲ್ಲ ಕೃತ್ಯ ಸಹ ಮನೆಯ CCTVಯಲ್ಲಿ ರೆಕಾರ್ಡ್ ಆಗಿದೆ. CCTV ರೆಕಾರ್ಡ್ ಆಗುತ್ತೆ ಎಂದು ಗೊತ್ತಿದ್ರು ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಹಾಗಾಗಿ ಪಾಲಿಶ್ ಮಾಡಿಕೊಡ್ತೀವಿ ಎಂದು ಮನೆ ಬಳಿ ಬರೋ ಅಪರಿಚಿತರ ನಂಬೋ ಮುನ್ನ ಎಚ್ಚರವಾಗಿರಿ ಎಂದು ಪೊಲೀಸರು ಸೂಚನೆ ನೀಡಿದ್ರು.

error: Content is protected !!