ಹಲವಾರು ಮನೆಮದ್ದುಗಳು ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣವಾಗಿ ನಮ್ಮ ಮನೆಯಲ್ಲೇ ಇವೆ. ಆದರೆ ನಮಗೆ ಮಾತ್ರ ಗೊತ್ತಿರುವುದಿಲ್ಲ. ಇಲ್ಲಿದೆ ಅವುಗಳ ಬಗ್ಗೆ ಮಾಹಿತಿ.
ನಾವು ಹೆಚ್ಚು ಭಾರವಾದ ಆಹಾರ ಸೇವನೆ ಮಾಡಿದಾಗ, ಅತಿ ಹೆಚ್ಚು ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧಿಗಳನ್ನು ತೆಗೆದುಕೊಂಡಾಗ, ನಿಮಗೆ ಶೀತ, ನೆಗಡಿ ಉಂಟಾದಾಗ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಇದು ವಿಪರೀತ ಮಟ್ಟಕ್ಕೆ ಹೋದಾಗ ಎದೆಯುರಿ ಕೂಡ ಕಾಣಿಸಬಲ್ಲದು.
ಈ ಸಮಯದಲ್ಲಿ ನಾವು ನೆನಪಿಸಿಕೊಳ್ಳುವುದು ಗ್ಯಾಸ್ಟ್ರಿಕ್ ಮಾತ್ರೆಯನ್ನು. ಆದರೆ ಪ್ರತಿಬಾರಿ ಗ್ಯಾಸ್ಟ್ರಿಕ್ ಉಂಟಾದಾಗ ಇದೇ ರೀತಿ ಮಾಡಲು ಸಾಧ್ಯವೇ? ಇದರಿಂದ ನಾವಾಗಿಯೇ ನಮ್ಮ ಆರೋಗ್ಯಕ್ಕೆ ಅಡ್ಡಪರಿಣಾಮಗಳನ್ನು ತಂದುಕೊಳ್ಳುತ್ತಿದ್ದೇವೆ ಎನಿಸುವುದಿಲ್ಲವೇ?
ಹಾಗಾಗಿ ನೈಸರ್ಗಿಕವಾಗಿ ನಮ್ಮ ದೇಹದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ರೋಗ ಲಕ್ಷಣಗಳನ್ನು ನಿವಾರಣೆ ಮಾಡಿಕೊಳ್ಳುವ ಹಾಗೆ ನಮ್ಮ ಮನೆಯಲ್ಲಿರುವ ಕೆಲವೊಂದು ಆರೋಗ್ಯಕರವಾದ ಉತ್ಪನ್ನಗಳು ನಮ್ಮ ಸಹಾಯಕ್ಕೆ ಬರಲಿವೆ. ಬನ್ನಿ ಈ ಲೇಖನದಲ್ಲಿ ಅವುಗಳ ಬಗ್ಗೆ ಮಾಹಿತಿ ಕಲೆ ಹಾಕೋಣ.
1) ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಆಮ್ಲೀಯತೆಯನ್ನು ಉಂಟಾಗದಂತೆ ನೋಡಿಕೊಳ್ಳುವ ಮೂಲಕ ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನೀವು ಬೇಕೆಂದರೆ ಸ್ವಲ್ಪ ಸಕ್ಕರೆ ಹಾಕಿಕೊಂಡು ಒಂದು ಲೋಟ ತಂಪಾದ ಹಾಲನ್ನು ಕುಡಿಯಬಹುದು. ಇಲ್ಲವೆಂದರೆ 1ಟೀ ಚಮಚ ತುಪ್ಪ ಬೆರೆಸಿದ ತಂಪಾದ ಹಾಲನ್ನು ಈ ಸಂದರ್ಭದಲ್ಲಿ ಸೇವನೆ ಮಾಡಬಹುದು.
2) ಹೊಟ್ಟೆಯ ಭಾಗದ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಗೆ ರಾಮಬಾಣವಾಗಿ ಏಲಕ್ಕಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೊಟ್ಟೆಯ ಭಾಗದಲ್ಲಿ ಉತ್ಪತ್ತಿಯಾಗುವ ಆಮ್ಲಿಯ ಪ್ರಮಾಣವನ್ನು ತಗ್ಗಿಸುವ ಗುಣ ಕಂಡುಬರುತ್ತದೆ.
3) ಜೇನುತುಪ್ಪ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಕಾರಣ, ಕೇವಲ 5 ನಿಮಿಷದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತದೆ.
4) ಮುಖ್ಯವಾಗಿ ಹೊಟ್ಟೆಯ ಭಾಗದ ಕಿರಿಕಿರಿ ಮತ್ತು ಆಮ್ಲಿಯ ಪ್ರಮಾಣವನ್ನು ಇದು ಕಡಿಮೆ ಮಾಡುವ ಶಕ್ತಿ ಪಡೆದಿದೆ. ಹೊಟ್ಟೆಯ ಭಾಗದಲ್ಲಿ ಹೆಚ್ಚು ಆಮ್ಲದ ಪ್ರಮಾಣ ಉತ್ಪತ್ತಿಯಾಗದಂತೆ ಜೀರಿಗೆ ನೋಡಿಕೊಳ್ಳಬಲ್ಲದು. ಇದರಿಂದ ಹೊಟ್ಟೆಯ ಭಾಗದಲ್ಲಿ ಅಲ್ಸರ್ ಉಂಟಾಗುವ ಸಾಧ್ಯತೆ ಕೂಡ ಇರುವುದಿಲ್ಲ.