ಚಿಕ್ಕೋಡಿ: ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಬೆಂಕಿ ತಗುಲಿ ಮನೆ ಹೊತ್ತಿ ಉರಿದಿರುವ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರಭುವಾಡಿಯಲ್ಲಿ ಸಂಭವಿಸಿದೆ.
ದಿಲೀಪ್ ಶಂಕರ್ ಕದಂ ಎಂಬುವವರ ಮನೆಯಲ್ಲಿ ಇರುವ ಗ್ಯಾಸ್ ಸಿಲಿಂಡರ್ ಏಕಾಏಕಿಯಾಗಿ ಲೀಕ್ ಆಗಿ ಬೆಂಕಿ ತಗುಲಿದೆ. ಇದರಿಂದ ಮನೆಗೆ ಬೆಂಕಿ ಹತ್ತಿ ಮನೆಯಲ್ಲಿರುವ ಯಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.
ಬೆಂಕಿಯಿಂದ ಸಿಲುಕಿರುವ ಮನೆ ಧಗಧಗನೆ ಹೊತ್ತಿ ಉರಿದಿದೆ. ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆಗಿದ್ದರಿಂದ ಈ ಘಟನೆ ನಡೆದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಮನೆಯ ಸದಸ್ಯರು ಪಾರಾಗಿದ್ದಾರೆ. ಆಗ ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ರು. ಇನ್ನೂ ಘಟನೆಯಿಂದ ಸುತ್ತಮುತ್ತಲಿರುವ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.