ಚಿಕ್ಕೋಡಿ: ಪ್ರಕಾಶ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಾಣ ಆಗಿರುವ ಕೇಂದ್ರೀಯ ವಿದ್ಯಾಲಯ ಕಟ್ಟಡಕ್ಕೆ, ಶಾಸಕರಾದ ಗಣೇಶ ಹುಕ್ಕೇರಿಯವರು ಮಂಜೂರು ಮಾಡಿದ್ದ ಸುಮಾರು 16 ಲಕ್ಷ ರೂಪಾಯಿ ವೆಚ್ಚದ ಕಿರು ನೀರಿನ ಯೋಜನೆಯನ್ನು, ಚಿಂಚಣಿ ಅಲ್ಲಮಪ್ರಭು ಮಠದ ಶ್ರೀಗಳು ಉದ್ಘಾಟಿಸಿದರು.
ಈ ವೇಳೆ ಮಾಧ್ಯಮದವರಿಗೆ ಮಾತನಾಡಿದ ಶ್ರೀಗಳು ಚಿಕ್ಕೋಡಿ ಜಿಲ್ಲೆ ಮಾಡಲು ಬೇಕಾಗಿರುವ ಎಲ್ಲ ಸೌಕರ್ಯವನ್ನ ಪ್ರಕಾಶ್ ಹುಕ್ಕೇರಿ ಮತ್ತು ಗಣೇಶ್ ಹುಕ್ಕೇರಿಯವರು ಒದಗಿಸುತ್ತಾ ಬಂದಿದ್ದಾರೆ. ಸರ್ಕಾರಿ ಕಚೇರಿ ಹಾಗೂ ಶೈಕ್ಷಣಿಕ ಕೇಂದ್ರಗಳನ್ನು ಚಿಕ್ಕೋಡಿ ಪಟ್ಟಣಕ್ಕೆ ತರುವುದರ ಜೊತೆಗೆ , ಈ ಭಾಗದ ಸರ್ವೊತೊಮುಖ ಅಭಿವೃದ್ಧಿಗಾಗಿ ಹುಕ್ಕೇರಿ ಕುಟುಂಬದ ಕೊಡುಗೆ ಅಫಾರ ಎಂದು ತಿಳಿಸಿದರು.
ಸುಮಾರು 18 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕೋಡಿಯಲ್ಲಿ ನಿರ್ಮಾಣ ಆಗಿರುವ ಬೃಹತ್ ಕೇಂದ್ರೀಯ ಕಟ್ಟಡದ ಮೂಲ ರೂವಾರಿ ಪ್ರಕಾಶ್ ಹುಕ್ಕೇರಿ. ತಂದೆಯ ಜೊತೆಗೆ ಹೆಜ್ಜೆ ಹಾಕುತ್ತಿರುವ ನಮ್ಮ ಕ್ಷೇತ್ರದ ಶಾಸಕರಾದ ಗಣೇಶ್ ಹುಕ್ಕೇರಿಯವರು, ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವುದು ನೀಜಕ್ಕೂ ಶ್ಲಾಘನೀಯ. ತಂದೆ – ಮಗ ಇಬ್ಬರು ಜನಪರವಾದ ರಾಜಕಾರಣಿಗಳು ಎಂದು ಹೇಳಲು ಹೆಮ್ಮೆ ಇದೆ ಎಂದು ಶ್ರೀಗಳು ಬಣ್ಣಿಸಿದರು.
ಇನ್ನೂ ಕೋವಿಡ್ ಸಂದರ್ಭದಲ್ಲಿ ಹುಕ್ಕೇರಿ ಕುಟುಂಬ ಮಾಡಿರುವ ಕಾರ್ಯ ಯಾವತ್ತೂ ಮರೆಯಲು ಸಾಧ್ಯವಿಲ್ಲ, ಕೋವಿಡ್ ಸೇಂಟರ್ ನಿರ್ಮಾಣ ಮಾಡಿ ಉಚಿತ ಚಿಕಿತ್ಸೆ ನೀಡುವುದರಿಂದ ಹಿಡಿದು, ಉಚಿತ ವ್ಯಾಕ್ಸಿನ್ ಕೊಡುವುದರ ತನಕ ಮಾಡಿರುವ ಒಂದೊಂದು ಕಾರ್ಯಗಳು ದೇವರ ಕಾರ್ಯಗಳು ಇದ್ದಂತೆ, ಸ್ವಂತ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ, ಇಂತಹ ಉತ್ತಮ ಕಾರ್ಯ ಮಾಡುತ್ತಿರುವ ಶಾಸಕರು ಹಾಗೂ ಅವರ ತಂದೆಯವರಿಗೆ ಉತ್ತಮ ಆರೋಗ್ಯ, ಆಯಸ್ಸು ಹಾಗೂ ಯಶಸ್ಸು ಸಿಗಲಿ ಎಂದು ಅಲ್ಲಮಪ್ರಭು ಸ್ವಾಮಿಜಿಗಳು ತಿಳಿಸಿದರು.
ಬಳಿಕ ಮಾತನಾಡಿದ ಶಾಸಕ ಗಣೇಶ್ ಹುಕ್ಕೇರಿ, ಚಿಕ್ಕೋಡಿ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ನಮ್ಮ ನಾಯಕರಾದ ಪ್ರಕಾಶಣ್ಣಾ ಹುಕ್ಕೇರಿಯವರು, ಚಿಕ್ಕೋಡಿ ಪಟ್ಟಣಕ್ಕೆ ಹೊಸ ಕೇಂದ್ರೀಯ ವಿದ್ಯಾಲಯ ಕಟ್ಟಡ ಮಂಜೂರು ಮಾಡುವುದರ ಜೊತೆಗೆ, ಸದಲಗಾ ಪಟ್ಟಣಕ್ಕೆ ಇನ್ನೊಂದು ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿದ್ದಾರೆ. ಅವರ ಆಶಯದಂತೆ, ಕೇಂದ್ರೀಯ ವಿದ್ಯಾಲಯಕ್ಕೇ ಬೇಕಾಗಿರುವ ಮೂಲ ಸೌಕರ್ಯವನ್ನ ನಾನು ಒದಗಿಸುತ್ತಿದ್ದೆನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾಧ್ಯಯರು, ಸಿಬ್ಬಂದಿಗಳು, ಚಿಕ್ಕೋಡಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.