ಬೆಳಗಾವಿ: ಚಿಕ್ಕೋಡಿಗೆ ಮಂಜೂರ ಆಗಿರುವ ಆಕ್ಸಿಜನ್ ಪ್ಲ್ಯಾಂಟ್ ಕಾಮಗಾರಿ ಆದಷ್ಟು ಬೇಗ ಪ್ರಾರಂಭ ಮಾಡಬೇಕೆಂದು ಶಾಸಕ ಗಣೇಶ್ ಹುಕ್ಕೇರಿ ಒತ್ತಾಯಿಸಿದ್ದಾರೆ.
” ರೈಲು ಹೋದ ಬಳಿಕ ಟಿಕೇಟ್ ತೊಗೊಂಡು ಏನು ಪ್ರಯೋಜನ..?”. ಅದೆ ರೀತಿ ಮಂಜೂರ ಆಗಿರುವ ಆಕ್ಸಿಜನ್ ಪ್ಲ್ಯಾಂಟ್ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಪ್ರಾರಂಭ ಆಗದೆ, ಆಮೇಲೆ ಪ್ರಾರಂಭ ಮಾಡಿದ್ರೆ ಏನು ಪ್ರಯೋಜನ.? ಎಂದು ಚಿಕ್ಕೋಡಿ ಶಾಸಕರು ಪ್ರಶ್ನಿಸಿದ್ದಾರೆ.
ಕೋರೊನಾ ಎರಡನೆ ಅಲೆಯಲ್ಲಿ ನಮ್ಮ ಭಾಗದ ಜನ ಬಹಳಷ್ಟು ಕಷ್ಟವನ್ನು ಅನುಭವಿಸಿದ್ದಾರೆ, ಕೆಲವರು ಜೀವ ಕೂಡ ಕಳೆದು ಕೊಂಡಿದ್ದಾರೆ. ಎರಡನೇ ಅಲೆಯಲ್ಲಿ ಜನರಿಗೆ ಅವಶ್ಯಕತೆ ಎನಿಸಿದ್ದನ್ನ ಮೂರನೇ ಅಲೆಯ ಪ್ರಾರಂಭಕ್ಕೂ ಮುನ್ನ ಸರಿ ಮಾಡದೆ ಇದ್ರೆ , ಮತ್ತೆ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಕೋರೊನಾ ಎರಡನೇ ಅಲೆ ಸಂದರ್ಭದಲ್ಲಿ ನಮ್ಮ ಚಿಕ್ಕೋಡಿ ಭಾಗಕ್ಕೆ ಅತಿ ಅವಶ್ಯಕ ಎನಿಸಿದ್ದೂ, ಆರ್.ಟಿ.ಪಿ.ಸಿ.ಆರ್ ಸೆಂಟರ್ ಮತ್ತು ಆಕ್ಸಿಜನ್ ಪ್ಲ್ಯಾಂಟ್. ಈಗಾಗಲೇ ನಾನು ಚಿಕ್ಕೊಡಿಗೆ ಆರ್.ಟಿ.ಪಿ.ಸಿ.ಆರ್ ಸೆಂಟರ್ ಮಂಜೂರು ಮಾಡಿಕೊಂಡು ಬಂದಿದ್ದೆನೆ. ಅದರ ನಿರ್ಮಾಣ ಕಾರ್ಯ ಕೂಡ ಪ್ರಾರಂಭ ಮಾಡಲಾಗಿದ್ದೂ, ಕೆಲವೆ ದಿನಗಳಲ್ಲಿ ಟೆಸ್ಟಿಂಗ್ ಪ್ರಾರಂಭ ಮಾಡಲಾಗುತ್ತದೆ. ಚಿಕ್ಕೋಡಿಗೆ ಮಂಜೂರ ಆಗಿರುವ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣ ಕಾರ್ಯ ಕೂಡ ಆದಷ್ಟು ಬೇಗ ಪ್ರಾರಂಭ ಆಗಬೇಕು ಎಂದು ಈ ವೇಳೆ ಶಾಸಕ ಗಣೇಶ್ ಹುಕ್ಕೇರಿಯವರು ಒತ್ತಾಯ ಮಾಡಿದ್ದಾರೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಕೋರೊನಾ 3 ನೇ ಅಲೆಯ ಪ್ರಾರಂಭ ಆಗಿದೆ. ನಮ್ಮ ಚಿಕ್ಕೋಡಿ ಮಹಾರಾಷ್ಟ್ರದ ಗಡಿ ಕ್ಷೇತ್ರ ಆಗಿರುವುದರಿಂದ ಹೆಚ್ಚಿನ ಮುನ್ನಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದರಾರು ಹೆಚ್ಚಿನ ಆಸಕ್ತಿ ತೊರಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಶಾಸಕ ಗಣೇಶ್ ಹುಕ್ಕೇರಿಯವರು ಆಗ್ರಹಿಸಿದ್ದಾರೆ.