ಬೆಳಗಾವಿ: ಈ ಹಿಂದೆ ಅಧ್ಯಕ್ಷರಾಗಿದ್ದ ಎಲ್.ಬಿ.ಖೋತ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ, ಶಾಸಕ ಗಣೇಶ್ ಹುಕ್ಕೇರಿಯವರು ಆಯ್ಕೆ ಆಗಿದ್ದಾರೆ. ಇಂದು ನಡೆದ ಲಿಬರಲ್ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ,ಸರ್ವಾನುಮತದಿಂದ ಶಾಸಕ ಗಣೇಶ್ ಹುಕ್ಕೇರಿಯವರನ್ನು ಬ್ಯಾಂಕಿನ್ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಎರಡು ಬಾರಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಜನಮನ್ನಣೆ ಗಳಿಸಿರುವ ಗಣೇಶ ಹುಕ್ಕೇರಿಯವರಿಗೆ ಹೊಸ ಜವಾಬ್ಧಾರಿ ಸಿಕ್ಕಿರುವುದಕ್ಕೆ ಶಾಸಕರ ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ ರೀತಿಯಲ್ಲಿ ಅಧ್ಯಕ್ಷರಾಗಿ ಬ್ಯಾಂಕ್ ಅಭಿವೃದ್ಧಿ ಪಡಿಸುವುದರ ಜೊತೆಗೆ, ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ ಸಧೃಡ ಮಾಡುತ್ತಾರೆ ಎಂದು ಆಡಳಿತ ಮಂಡಳಿ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ..