ಕೂಗು ನಿಮ್ಮದು ಧ್ವನಿ ನಮ್ಮದು

ನಾವು ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ: ಜಿ.ಎಂ ಸಿದ್ದೇಶ್ವರ್

ದಾವಣಗೆರೆ: ಯಾರೇ ಪ್ರತಿಭಟನೆ ಮಾಡ್ಲಿ ಮೇಕೆದಾಟು ಯೋಜನೆ ಮಾಡೇ ಮಾಡ್ತೇವೆ ಎಂದು ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ರು. ಸುದ್ದಿಗಾರರ ಜತೆ ಮಾತನಾಡುತ್ತಾ ಮೇಕೆದಾಟು ಯೋಜನೆ ಕುರಿತು ಜಿ.ಎಂ.ಸಿದ್ದೇಶ್ವರ್ ಮಾತನಾಡಿದ್ರು. ಈಗಾಗಲೇ ಮುಖ್ಯಮಂತ್ರಿ ನಿರ್ಧಾರ ಮಾಡಿದ್ದಾರೆ. ನಾವು ಮೇಕೆದಾಟು ಮಾಡೇ ಮಾಡ್ತೇವೆ.

ನಾವು ಯಾರಿಗೂ ಜಗ್ಗಲ್ಲ ಬಗ್ಗಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ C.T. ರವಿ ಏನು ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ನಾಡಿನ ರಕ್ಷಣೆ ನಮ್ಮ ಹೊಣೆ. ಹಾಗಾಗಿ ನಾವು ಮೇಕೆದಾಟು ಮಾಡೇ ಮಾಡುತ್ತೇವೆ ಎಂದು ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ. ಇನ್ನೂ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ನಾನು ವಿರೋಧ ಮಾಡಲ್ಲ. ಕ್ಯಾಂಟಿನ್ ಹೆಸರಿನಲ್ಲಿ ನಾನಾ ರೀತಿಯಲ್ಲಿ ವಿರೋಧ ಆಗುತ್ತಿದೆ. ಇಂದಿರಾ ಗಾಂಧಿ ನಮ್ಮ ದೇಶದ ಲೀಡರ್ ಆಗಿದ್ದವರು.

ದೇಶದ ಪ್ರಧಾನಿಯಾಗಿ ೧೦,೧೫ ವರ್ಷ ಆಡಳಿತ ಮಾಡಿದ್ದಾರೆ. ವಾಜಪೇಯಿ, ಇಂದಿರಾ ಗಾಂಧಿ ಆಡಳಿತವನ್ನು ನಾವು ಅಲ್ಲ ಗೆಳೆಯುವಂತಿಲ್ಲ ಆದ್ದರಿಂದ ಈ ಬಗ್ಗೆ ನಾನು ವಿರೋಧ ಮಾಡಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡುತ್ತೆ. ಹುಕ್ಕಾ ಬಾರ್ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಸಿದ್ದೇಶ್ವರ್ ಹೇಳಿದ್ರು. ಬೆಂಗಳೂರಿನಿಂದ ೯೦ ಕಿಲೋ ಮೀಟರ್‌ ದೂರದ ರಾಮನಗರ ಜಿಲ್ಲೆಯಲ್ಲಿ ಇರುವ ಸ್ಥಳವೇ ಮೇಕೆದಾಟು.

ಇನ್ನೂ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ ಮೇಕೆದಾಟು. ಮೇಕೆದಾಟು ಹತ್ತಿರ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟನ್ನು ಕಟ್ಟಲು ಕರ್ನಾಟಕ ಸರ್ಕಾರವು ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿ ಸಲವೂ ಕ್ಯಾತೆ ತೆಗೆಯುತ್ತದೆ. ಬೆಂಗಳೂರು ನಗರಕ್ಕೆ ನೀರು ಬರುವುದು K.R.S ಡ್ಯಾಮ್ ಇಂದ. ಮಳೆಗಾಲದಲ್ಲಿ ಡ್ಯಾಮ್ ಭರ್ತಿ ಆದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನವೂ ೧೪೦೦ ದಶಲಕ್ಷ ಲೀಟರ್ ನೀರು ಅಗತ್ಯವಿದೆ.ಎಂದಿದ್ದಾರೆ

ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆಯು ಶೇಕಡಾ ೧೫ ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ೨೦೧೨ ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆಯು ಹೆಚ್ಚಾಗುತ್ತಿದೆ. ಹಾಗಾಗಿ ಇಲ್ಲಿ ಸಂಗ್ರಹವಾದ ಡ್ಯಾಮ್ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದು.

error: Content is protected !!