ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಜಾಗ ಇಲ್ಲದಷ್ಟು ಹೂಗಳನ್ನು ಮಾರಾಟ ಮಾಡಲು ಬಂದಿರುವ ರೈತರು, ತಂದ ಹೂ ಮಾರಾಟವಾಗದೆ ತಿಪ್ಪಗೆ ಸುರಿದು ಬಂದ ದಾರಿಗೆ ಸುಂಕವಿಲ್ಲದೆ ಬರಿಗೈಯಲ್ಲಿ ಮನೆಕಡೆ ಹೋಗುತ್ತಿರುವ ಹೂ ಬೆಳೆಗಾರರು, ಈ ದೃಶ್ಯಗಳು ಕಂಡುಬಂದ್ದಿದ್ದು ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯಲ್ಲಿ, ಇತ್ತಿಚೇಗೆ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹೂ ಹೊಳಪು ಕಳೆದುಕೊಂಡಿದ್ರೆ, ಅತ್ತ ಜಿಲ್ಲೆಯಲ್ಲಿ ಹೂ ಇಳುವರಿ ದುಪ್ಟಟ್ಟಾಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ರಪ್ತಾಗುತ್ತಿದ್ದ ಹೂಗಳನ್ನು ಮಾರುಕಟ್ಟೆಯಲ್ಲಿ ಕೇಳೋರೆ ಇಲ್ಲದೆ ಹೂಗಳು ಬೀದಿಪಾಲು ಆಗುತ್ತಿವೆ.
ಇನ್ನು ಜಿಲ್ಲೆಯಲ್ಲಿ ಬಹುತೇಕ ರೈತರು ಹೂ ಬೆಳೆಯುತ್ತಿದ್ದು, ವೆರೈಟಿ ಹೂಗಳನ್ನು ಬಳೆದು ಇಡೀ ರಾಜ್ಯಕ್ಕೆ ಸರಬರಾಜು ಮಾಡುತಿದ್ದರು. ಜಿಲ್ಲೆಯಲ್ಲಿ ನೂರಕ್ಕೆ ಶೇಕಡಾ 70 ರಷ್ಟು ರೈತರು ಹೂ ಬೆಳೆಯ ಮೇಲೆ ಅವಲಂಬಿತರಾಗಿರೋದ್ರಿಂದ ಹೂ ಬೆಳೆಯಲ್ಲಿ ದುಪ್ಪಟ್ಟಾಗಿ, ಮಾರುಕಟ್ಟೆಯಲ್ಲಿ ಜಾಗ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಹೂ ಬೆಲೆ ಪಾತಾಳಕ್ಕೆ ಕುಸಿದಿದ್ದು, ಸೆಂಟ್ ಎಲ್ಲೋ ಸೇವಂತಿ ಹೂ 200 ರೂಪಾಯಿಯಿಂದ 100 ರೂಪಾಯಿಗೆ ಕುಸಿದಿದೆ. ಮೆರಾಬುಲ್ ಹೂ ಕೇವಲ ಹತ್ತು ರೂಪಾಯಿಗೆ ಮಾರಾಟವಾಗುತ್ತಿದೆ. ಸೇವಂತಿ ಚಾಕಲೇಟ್ 120 ರಿಂದ 70 ಕ್ಕೆ ಕುಸಿದಿದ್ರೆ, ಐಶ್ವರ್ಯ್ಯ 250 ರೂಪಾಯಿಯಿಂದ ನೂರು ರೂಪಾಯಿಗೆ ಇಳಿದಿದೆ. ಇನ್ನು ಚೆಂಡು ಹೂ 70 ರಿಂದ 10 ರೂಪಾಯಿಗೆ ಕುಸಿದಿದ್ರೆ, ಗುಲಾಬಿಯನ್ನ ಕೇಳೋರೆ ಇಲ್ಲದೆ, ತಿಪ್ಪೆಗೆ ಸುರಿಯುವಂತಾಗಿದೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಹೂ ಬೆಳೆಗಾರನಿಗೆ ಒಂದು ವರ್ಷದಲ್ಲಿ ಒಂದು ತಿಂಗಳಲ್ಲಿ ಮಾತ್ರ ಹೂವಿಗೆ ಬೆಲೆ ಸಿಕ್ಕರೆ ವರ್ಷವಿಡೀ ಬೆಲೆ ಇಲ್ಲದೆ ನಷ್ಟ ಅನುಭವಿಸುತ್ತಾನೆ. ಇನ್ನು ಜಿಲ್ಲೆಯಲ್ಲಿ ಹೂ ಬೆಳೆಯುವ ರೈತರ ಸಂಖ್ಯೆಯೂ ಹೆಚ್ಚಾಗಿದ್ದು, ಮಳೆಯ ಹೊಡೆತಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.